ಹುಮನಾಬಾದ ತಾಲೂಕಿನ ಕನಕಟ್ಟಾ ಸರಕಾರಿ ಪ್ರೌಢ ಶಾಲೆ.
- ಸಿಸಿಆರ್ಟಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ
ಹುಮನಾಬಾದ್: ಭಾರತ ಸರ್ಕಾರದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಆ್ಯಂಡ್ ಟ್ರೈನಿಂಗ್ (ಸಿಸಿಆರ್ಟಿ) ಸಹಯೋಗದಲ್ಲಿ ಆಯೋಜಿಸಲಾಗುವ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿರುವುದು ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ.
ಸಿಸಿಆರ್ಟಿ ಪ್ರಕಟಿಸಿರುವ ರಾಷ್ಟ್ರ ಮಟ್ಟದ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದಿಂದ ಕನಕಟ್ಟಾ ಸರ್ಕಾರಿ ಪ್ರೌಢಶಾಲೆ ಮಾತ್ರ ಸ್ಥಾನ ಪಡೆದಿದೆ. ದೇಶದ ವಿವಿಧ ರಾಜ್ಯಗಳಿಂದ ಒಂದರಿಂದ ಎರಡು ಶಾಲೆಗಳನ್ನು ಮಾತ್ರ ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ.
ಶಾಲೆಯ ವಿದ್ಯಾರ್ಥಿಗಳಲ್ಲಿರುವ ಸಾಂಸತಿಕ ಪ್ರತಿಭೆ, ಶಿಕ್ಷಕರ ನಿರಂತರ ಮಾರ್ಗದರ್ಶನ ಹಾಗೂ ಶಾಲಾ ಆಡಳಿತ ಮಂಡಳಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ರಾಷ್ಟ್ರಮಟ್ಟದ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಶಾಲೆ, ತಾಲೂಕು ಹಾಗೂ ಬೀದರ್ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತವಾಗಿದೆ. ಈ ಆಯ್ಕೆಯಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಗ್ರಾಮಸ್ಥರಿಗೂ ಸಂತಸ ಮೂಡಿಸಿದೆ.
"
ಕರ್ನಾಟಕದಿಂದ ಕನಕಟ್ಟಾ ಸರ್ಕಾರಿ ಪ್ರೌಢಶಾಲೆ ಮಾತ್ರ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅಭಿನಂದಿಸುತ್ತೇನೆ. ಮುಂದಿನ ಸ್ಪರ್ಧೆಯಲ್ಲಿಯೂಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸುತ್ತೇನೆ.
— - > ವೆಂಕಟೇಶ ಗೂಡಾಳ ಬಿಇಒ ಹುಮನಾಬಾದ್
"
ರಾಜ್ಯದಿಂದ ಏಕೈಕ ನಮ್ಮ ಶಾಲೆ ಆಯ್ಕೆಗೊಂಡಿರುವುದು ಅತ್ಯಂತ ಸಂತಷ ತಂದಿದೆ. ಇದರಲ್ಲಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನಮ್ಮ ಶಿಕ್ಷಕ ವೃಂದದ ಹಾಗೂ ವಿದ್ಯಾರ್ಥಿಗಳ ಶ್ರಮ ಇದೆ.
— -> ವೀರಣ್ಣ ಜಮಖಂಡಿ ಶಾಲೆಯ ಮುಖ್ಯಗುರು