Selection for Koratagere Karave unit
ಕೊರಟಗೆರೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ)ದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೊರಟಗೆರೆ ಕರವೇ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷ ನರಸಿಂಹರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಹರೀಶ್ಬಾಬು, ನಗರ ಘಟಕ ಅಧ್ಯಕ್ಷ ಶಂಕರ್ಬಾಬು, ಉಪಾಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಕಾರ್ಯದರ್ಶಿ ಹನುಮೇಶ್, ಸಂಚಾಲಕ ವೀರಕ್ಯಾತಯ್ಯ, ತೇಜಸ್, ಸದಸ್ಯ ಶ್ರೀನಿವಾಸ್, ಬೋಗೇಶ್, ಶಶಿಕುಮಾರ್ ನೂತನವಾಗಿ ಆಯ್ಕೆಯಾದರು.
ತಾಲೂಕು ಅಧ್ಯಕ್ಷ ನರಸಿಂಹರಾಜು ಮಾತನಾಡಿ, ರಾಜ್ಯಾಧ್ಯಕ್ಷ ಪ್ರವಿಣ್ ಶೆಟ್ಟಿ ಅವರ ನೇತೃತ್ವದಲ್ಲಿ ಕರವೇ ಜನಪರ ಹೋರಾಟಗಳು ಯಶಸ್ವಿಯಾಗಿ ನಡೆಯುತ್ತಿದೆ. ನಾಡು&-ನುಡಿ, ರೈತಪರ, ಬಡ-ಕುಟುಂಬಗಳ ಕಾರ್ಮಿಕರ ಪರ, ಸರ್ಕಾರಿ ಶಾಲೆ ಅಭಿವೃದ್ಧಿ, ಅನ್ಯಾಯ ವಿರುದ್ಧ ನಮ್ಮ ಹೋರಾಟ ಎಂದರು.