ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ಕಲಬುರಗಿಯ ಎಸ್.ಆರ್.ಎನ್.ಮೆಹತಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥ ಬಸವರಾಜ ತಳಕೇರಿ, ಕರಾಟೆ ತರಬೇತಿದಾರ ಕೃಷ್ಣಾ ಗೌಳಿ, ಮಣಿಕಂಠ ಜುಮ್ಮಣ್ಣಾ ಇದ್ದಾರೆ.
- ಕಲಬುರಗಿ ಎಸ್.ಆರ್.ಎನ್.ಮೆಹತಾ ಶಾಲೆ
ಕಲಬುರಗಿ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಲಬುರಗಿಯ ಎಸ್.ಆರ್.ಎನ್.ಮೆಹತಾ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಮರ ಭೈರಾಮಡಗಿ-10 ವರ್ಷದ ವಯೋಮಿತಿ ಕಟಾ ಸ್ಪರ್ಧೆ&ಪ್ರಥಮ, ವೃತಿಕಾ ಗಚ್ಚಿ-ಏಳು ವರ್ಷದ ವಯೋಮತಿ ಕುಮತೆ ಸ್ಪರ್ಧೆ&ಪ್ರಥಮ, ಶ್ವೇತಾ ತಾಂಡೂರಕರ್&14 ರಿಂದ 15 ವರ್ಷದ&ಕುಮತೆ ಸ್ಪರ್ಧೆ &48 ಕೆ.ಜಿ-ಪ್ರಥಮ, ವೇದಾಂತ ಚಿಂಚೋಳಿ &14 ರಿಂದ 15 ವರ್ಷದ&ಕುಮತೆ ಸ್ಪರ್ಧೆ-52 ಕೆ.ಜಿ ದ್ವೀತಿಯ, ನೇಹಾಲ್ ಪರಮೇಶ್ವರ-14 ರಿಂದ 15 ವರ್ಷದ&ಕಟಾ ಸ್ಪರ್ಧೆ-ತೃತಿಯ, ವಿಕ್ರಾಂತ ಹೂಗಾರ-ಏಳು ವರ್ಷದ ವಯೋಮತಿ ಕುಮತೆ ಸ್ಪರ್ಧೆ&ತೃತಿಯ, ಏಸ್ತರ್ರಾಣಿ -12 ವರ್ಷದ ವಯೋಮತಿ ಕುಮತೆ ಸ್ಪರ್ಧೆ-35 ಕೆ.ಜಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿ ಚಕೋರ ಮೆಹತಾ, ಪ್ರಾಚಾರ್ಯ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥ ಬಸವರಾಜ ತಳಕೇರಿ, ಕರಾಟೆ ತರಬೇತಿದಾರ ಕೃಷ್ಣಾ ಗೌಳಿ, ಮಣಿಕಂಠ ಜುಮ್ಮಣ್ಣಾ ಹರ್ಷ ವ್ಯಕ್ತಪಡಿಸಿದ್ದಾರೆ.