ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ವನಜಾ, ಶಿಕ್ಷಕರಾದ ಸುನಿಲ್ಕುಮಾರ್, ವೇಣಿಬಾಯಿ ಇದ್ದರು.
ಪಾತಪಾಳ್ಯ :ವಿದ್ಯಾರ್ಥಿಗಳು ಅವಕಾಶ ಬಳಸಿಕೊಂಡು ಪ್ರತಿಭಾವಂತರಾಗಿ ಹೊರಹೊಮ್ಮಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷೆ ವನಜಾ ತಿಳಿಸಿದರು.
ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಬೆಳವಣಿಗೆ ಹಾಗೂ ಮಕ್ಕಳ ಕಲಿಕೆಗೆ ಶಿಕ್ಷಕರ ಇಚ್ಛಾಶಕ್ತಿ ಅವಶ್ಯ. ಇದರೊಂದಿಗೆ ಪಾಲಕರು ಕೈಜೋಡಿಸಿದಾಗ ಶಾಲೆ, ಮಕ್ಕಳು ಪ್ರಗತಿ ಹೊಂದಲು ಸಾಧ್ಯ ಎಂದರು.
ಪ್ರಭಾರ ಮುಖ್ಯಶಿಕ್ಷಕ ಎನ್.ಆರ್.ಕುಮಾರ್ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮೌಲ್ಯಯುತ ಶಿಕ್ಷಣ ಕಲಿಸುವಂತಾಗಬೇಕು. ಇದರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ನೋಡಿಕೊಳ್ಳಬಹುದು. ಸಮಾಜದಲ್ಲಿ ಉತ್ತಮ ಹಾದಿಯಲ್ಲಿ ಸಾಗುವಂತಾಗಲು ನೈತಿಕ ಶಿಕ್ಷಣ ನೀಡಿ ಎಂದರು.
ಶಿಕ್ಷಕಿ ವೇಣುಬಾಯಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ತಂದೆ&ತಾಯಿಯರ ಶ್ರಮ ಮುಖ್ಯ. ಓದುವಾಗ ಟಿವಿ ಹಾಕುವುದು, ಇನ್ನೊಬ್ಬರಿಗೆ ಹೋಲಿಕೆ ಮಾಡಬಾರದು. ಮಕ್ಕಳ ಮನಸ್ಸು ಸೂಕ್ಷ$್ಮವಾಗಿದ್ದು, ಪಾಲಕರು ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಶಿಕ್ಷಕ ಸುನಿಲ್ಕುಮಾರ್, ರಮೇಶ್, ಎಸ್ಡಿಎಂಸಿ ಸದಸ್ಯರಾದ ಗಿರಿಜಮ್ಮ, ವರಲಕ್ಷಿ$್ಮ, ಶಶಿಕಲಾ, ಚಂದ್ರನಾಯಕ್, ಶ್ರೀನಿವಾಸ, ಹರೀಶ ಇದ್ದರು.