Seed treatment is the first step towards a good yield.
ಕೃಷಿ ೇತ್ರದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಮತ್ತು ಆಧುನಿಕ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವ ಸದುದ್ದೇಶದಿಂದ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಧೀನದ ಚಿಂತಾಮಣಿ ರೇಷ್ಮೆ ಮಹಾವಿದ್ಯಾಲಯದ 4ನೇ ವರ್ಷದ ಬಿ.ಎಸ್ಸಿ. (ಆನರ್ಸ್) ರೇಷ್ಮೆ ಕೃಷಿ ವಿದ್ಯಾರ್ಥಿಗಳು ದೊಡ್ಡಹಳ್ಳಿಯಲ್ಲಿ ರೈತರಿಗಾಗಿ "ಬೀಜೋಪಚಾರ' ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಿದರು
ವಿದ್ಯಾರ್ಥಿಗಳು ಕೃಷಿಕರಿಗೆ ಬಿತ್ತನೆ ಪೂರ್ವದಲ್ಲಿ ಕೈಗೊಳ್ಳಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಬೀಜೋಪಚಾರದ ಮಹತ್ವ, ಬೀಜ ಹಾಗೂ ಮಣ್ಣಿನ ಮೂಲಕ ಹರಡುವ ವಿವಿಧ ರೋಗಗಳ ಹತೋಟಿ, ಉತ್ತಮ ಮೊಳಕೆಯ ಪ್ರಮಾಣವನ್ನು ಕಾಯ್ದುಕೊಳ್ಳುವುದು, ಆರೋಗ್ಯಕರ ಬೆಳೆ ಸ್ಥಾಪನೆ ಹಾಗೂ ಅಂತಿಮವಾಗಿ ಹೆಚ್ಚಿನ ಇಳುವರಿ ಪಡೆದು ಆರ್ಥಿಕ ಲಾಭಗಳಿಸುವುದರಲ್ಲಿ ಬೀಜೋಪಚಾರದ ಪಾತ್ರವೇನು ಎಂಬುದನ್ನು ವಿವರವಾಗಿ ವಿವರಿಸಿದರು.
ಬಿತ್ತನೆಗೂ ಮುನ್ನ ವೈಜ್ಞಾನಿಕ ಪದ್ಧತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಒಟ್ಟಾರೆ ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ರೈತರಿಗೆ ವಿದ್ಯಾರ್ಥಿಗಳು ತಿಳಿಸಿದರು.
ತಜ್ಞೆ ಡಾ.ಅಂಬಿಕಾ ಮಾತನಾಡಿ, ಇಂದಿನ ಬದಲಾದ ಹವಾಮಾನ ಹಾಗೂ ಕೃಷಿ ಸವಾಲುಗಳ ಹಿನ್ನೆಲೆಯಲ್ಲಿ ರೈತರು ಕಡ್ಡಾಯವಾಗಿ ಬೀಜೋಪಚಾರದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
ಬೀಜೋಪಚಾರವು ಉತ್ತಮ ಬೆಳೆಯ ಮೊದಲ ಹೆಜ್ಜೆಯಾಗಿದ್ದು, ರೈತರು ಇದನ್ನು ಕಡ್ಡಾಯವಾಗಿ ತಮ್ಮ ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮಸ್ಥರಿಂದ ಮೆಚ್ಚುಗೆ: ಕಾರ್ಯಕ್ರಮದಲ್ಲಿ ದೊಡ್ಡಹಳ್ಳಿಯ ಸುತ್ತಮುತ್ತಲಿನ ಹತ್ತಾರು ರೈತರು ಉತ್ಸಾಹದಿಂದ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ತರು ನೀಡಿದ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಇಂತಹ ಗ್ರಾಮೀಣ ವಿಸ್ತರಣಾ ಮತ್ತು ಜಾಗೃತಿ ಕಾರ್ಯಕ್ರಮಗಳು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವಲ್ಲಿ ಮತ್ತು ಕೃಷಿಯನ್ನು ಲಾಭದಾಯಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ಸಿ.ಆರ್.ಯಶೋಧರಾ, ಎಂ.ಸಂಜನಾ, ಹೊಸಮನಿ, ಎಚ್.ಡಿ.ನಂದನ್ ಕುಮಾರ್, ದಿಶಾ, ಎ.ಲಿಖಿತ್, ಪೂಜಾ, ನಿಸರ್ಗ, ಪ್ರಜ್ವಲ್, ಎ.ದಿನೇಶ್, ಕೆ.ಎಂ.ರುಚಿತಾ, ಚರಣ್ ಕುಮಾರ್, ಜಿ.ವರ್ಷಾ, ಹೀರೇಮಠ, ಭಾವನಾ ಇದ್ದರು.