ಎಲ್ಲವನ್ನೂ ಚಿಕಿತ್ಸಕ ಬುದ್ಧಿಯಿಂದ ಕಾಣಿ therapeutic mind
ಶ್ರೀನಿವಾಸಪುರ: ಜ್ಞಾನ, ವಿಜ್ಞಾನ ಸಮಿತಿ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿ ಬೆಳೆಸುತ್ತಿದೆ. ಸಮಾಜದಲ್ಲಿ ಮೂಢ ನಂಬಿಕೆ ಹೋಗಲಾಡಿಸಿ, ಪವಾಡದ ರಹಸ್ಯ ಬಯಲು ಮಾಡುವುದರ ಮೂಲಕ ವಿಜ್ಞಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಜ್ಞಾನ, ವಿಜ್ಞಾನ ಸಮಿತಿಯ ಅಧ್ಯಕ್ಷ ಜೆ.ಗೋಪಿನಾಥ್ ತಿಳಿಸಿದರು.therapeutic mind
ತಾಲೂಕಿನ ಸೋಮಯಾಜಲಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಜ್ಞಾನ ವಿಜ್ಞಾನ ಸಮಿತಿಯಿಂದ ಆಯೋಜಿಸಿದ್ದ ತಾಲೂಕುಮಟ್ಟದ ರಾಷ್ಟ್ರೀಯ ವಿಜ್ಞಾನ ದಿನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬಾರದು. ಚಿಕಿತ್ಸಕ ಬುದ್ಧಿಯಿಂದ ಮಾತ್ರ ನಿರ್ಭಯವಾಗಿ ಜೀವಸಲು, ಅಂಧಕಾರದಿಂದ ಹೊರಗೆ ಬದುಕಲು ಸಾಧ್ಯ. ಪ್ರತಿಯೊಬ್ಬರೂ ವಿಜ್ಞಾನದ ಸತ್ಯ ಅರಿತು ನಡೆಯಬೇಕು ಎಂದು ತಿಳಿಸಿದರು.
ಸರ್ ಸಿ.ವಿ.ರಾಮನ್ ಅವರ ಜೀವನ ಸಾಧನೆ ಕುರಿತು ಏರ್ಪಡಿಸಲಾಗಿದ್ದ ಆನ್ಲೈನ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಬಹುಮಾನ ಪಡೆದಿದ್ದ ತನಿಷಾ ಹಾಗೂ ಅನುಶ್ರೀ ಅವರನ್ನು ಸನ್ಮಾನಿಸಲಾಯಿತು.