Security guard's son is a doctor
ಪಾವಗಡ: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಗಂಗಾಧರಯ್ಯ ಅವರ ಪುತ್ರ ಹರ್ಷವರ್ಧನ್ ಎಂಬಿಬಿಎಸ್ ಓದಿ ವೈದ್ಯರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹರ್ಷವರ್ಧನ್ ಪಶ್ಚಿಮ ಬಂಗಾಳದ ಕೋಲ್ಕತ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನಲ್ಲಿ ಏಪ್ರಿಲ್ 30ರಂದು ಶೇ.85 ಲಿತಾಂಶದೊಂದಿಗೆ ವೈದ್ಯಕಿಯ ಶಿಕ್ಷಣ ಮುಗಿಸಿದ್ದಾರೆ.
ಪಾವಗಡ ತಾಲೂಕು ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ಗುಜ್ಜಾರಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದ ಗಂಗಾಧರಯ್ಯ ಮೊದಲು ಲಿಂಗದಹಳ್ಳಿ-, ಪಾವಗಡ ಖಾಸಗಿ ಬಸ್ ಏಜೆಂಟ್ ಆಗಿದ್ದರಲ್ಲದೆ ಗ್ರಾಮದಲ್ಲೇ ವ್ಯವಸಾಯ ಮಾಡಿಕೊಂಡಿದ್ದರು.
ವ್ಯವಸಾಯದಿಂದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿಲ್ಲವೆಂದು 2008ರಲ್ಲಿ ಕೂಲಿ ಕೆಲಸಕ್ಕಾಗಿ ಸಣ್ಣಪುಟ್ಟ ಉದ್ಯೋಗ ಅರಸಿ ಬೆಂಗಳೂರಿಗೆ ಪಯಣ ಬೆಳೆಸಿದರು. ಅಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿ ಕೆಲಸಕ್ಕೆ ಸೇರಿ, ಬರುವ ಅಲ್ಪ ಆದಾಯದಲ್ಲೇ ಮಗನಿಗೆ ವೈದ್ಯಕಿಯ ಶಿಕ್ಷಣ ಓದಿಸಿದರು. ಮಗನೂ ತಂದೆಯ ಕಷ್ಟವನ್ನು ಅರಿತು ರಾತ್ರಿ&ಹಗಲು ಅಭ್ಯಾಸ ಮಾಡಿ ವೈದ್ಯಕಿಯ ಶಿಕ್ಷಣ ಯಶಸ್ವಿಯಾಗಿ ಪೂರೈಸಿದ್ದಾರೆ. ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ&-ಮಗನೇ ಸಾಕ್ಷಿ.