ದ್ವಿತೀಯ ಪಿಯು ಫಲಿತಾಂಶ ಪ್ರಕಟ  
ರಾಜ್ಯ

ಈ ವರ್ಷವು ಬಾಲಕಿಯರೇ ಮೇಲುಗೈ! 7 ಲಕ್ಷದಲ್ಲಿ 6 ಲಕ್ಷ ವಿದ್ಯಾರ್ಥಿಗಳು ಪಾಸ್​; ಫಲಿತಾಂಶದಲ್ಲಿ ಶೇ.12.50 ಏರಿಕೆ

ಪ್ರಮುಖ ಮುಖ್ಯಾಂಶಗಳು

  • 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟ
  • ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ದಿಶಾ ರಾಜ್ಯಕ್ಕೆ ಪ್ರಥಮ
  • ವಿಜ್ಞಾನ ವಿಭಾಗದಲ್ಲಿ 597 ಅಂಕ ಪಡೆಯುವ ಮೂಲಕ ವೈಷ್ಣವಿ ಪ್ರಥಮ
ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಇಂದು ಪ್ರಕಟವಾಗಿದ್ದು, 600ಕ್ಕೆ 600 ಅಂಕ ಗಳಿಸುವ ಮೂಲಕ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ 73.45ರಷ್ಟು ಫಲಿತಾಂಶ

ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಫಲಿತಾಂಶ ಕಂಡುಬಂದಿದ್ದು, ಶೇ.86ರಷ್ಟು ರಿಸಲ್ಟ್​ ಲಭಿಸಿದೆ. ಪರೀಕ್ಷೆಗೆ ಹಾಜರಾದ 7.10 ಲಕ್ಷ ವಿದ್ಯಾರ್ಥಿಗಳ ಪೈಕಿ 6 ಲಕ್ಷ 10 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು 2025ರಲ್ಲಿ 73.45ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ, ಈ ಬಾರಿ 12.50ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಾಗಿರುವುದು ಪೋಷಕರು ಹಾಗೂ ರಾಜ್ಯ ಶಿಕ್ಷಣ ಇಲಾಖೆಗೆ ಖುಷಿ ತಂದಿದೆ.

ಬಾಲಕಿಯರೇ ಮೇಲುಗೈ

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಿಶಾ, ಆದಿತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 600 ಅಂಕಗಳನ್ನು ಗಳಿಸುವ ಮೂಲಕ ತಮ್ಮ ಪೋಷಕರಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇನ್ನು ಅದೇ ವಿಭಾಗದಲ್ಲಿ ಧ್ವನಿ ಎಸ್​.ಕೆ 599 ಅಂಕ ಪಡೆದಿದ್ದು, ಬೆಂಗಳೂರಿನ ರೋಹನ್​ 600ಕ್ಕೆ 597 ಅಂಕ ಪಡೆದಿದ್ದಾರೆ.

ಕಲಾ ವಿಭಾಗ

ಇನ್ನು ಕಲಾ ವಿಭಾಗದಲ್ಲಿ ಸಂಗೀತಾ ಮತ್ತು ಅರ್ಚನಾ ಇಬ್ಬರೂ 600ಕ್ಕೆ 598 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗ

600ಕ್ಕೆ 598 ಪಡೆಯುವ ಮೂಲಕ ಶಮನ್ಯು ಶೆಟ್ಟಿ, ನಂದನ್​ ನಾಯಕ್​ ಪ್ರಥಮ ಸ್ಥಾನ ಗಳಿಸಿದರೆ, ವೈಷ್ಣವಿ, ಆನರ್ವಿ 597 ಅಂಕ ಗಳಿಸಿದ್ದಾರೆ. ಅವರ ನಂತರದಲ್ಲಿ, ಮಹಿನ್​, ಶ್ರೇಷ್ಠ ಕಾಮತ್​ 596 ಪಡೆದಿದ್ದು, ಶ್ರೀಲಯ 593 ಅಂಕ ಪಡೆದಿದ್ದಾರೆ.