ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
- 79,597 ವಿದ್ಯಾರ್ಥಿನಿಯರು ಸೇರಿ ಒಟ್ಟು 1,72,151 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಫಲಿತಾಂಶ ಸುಧಾರಣೆ ಕೋರಿ 49,512 ಮಂದಿ ನೋಂದಾಯಿಸಿದ್ದಾರೆ.
- ಅನುತ್ತೀರ್ಣರಾಗಿರುವ 82,746 ಮಂದಿ, 794 ಖಾಸಗಿ ಅಭ್ಯರ್ಥಿಗಳು, 39,099 ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
- ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪರೀಕ್ಷೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಇಂದಿನಿಂದ (ಏ. 30ರಿಂದ ಮೇ 13ರವರೆಗೆ) ಆರಂಭವಾಗಲಿದೆ. 92,554 ವಿದ್ಯಾರ್ಥಿಗಳು ಹಾಗೂ 79,597 ವಿದ್ಯಾರ್ಥಿನಿಯರು ಸೇರಿ ಒಟ್ಟು 1,72,151 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಫಲಿತಾಂಶ ಸುಧಾರಣೆ ಕೋರಿ 49,512 ಮಂದಿ ನೋಂದಾಯಿಸಿದ್ದಾರೆ.
ಅನುತ್ತೀರ್ಣರಾಗಿರುವ 82,746 ಮಂದಿ, 794 ಖಾಸಗಿ ಅಭ್ಯರ್ಥಿಗಳು, 39,099 ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ. 4.15ರ ಎರಡು ಅವಧಿಯಲ್ಲಿ ನಡೆಯಲಿವೆ. ಗುರುವಾರ ಮೊದಲ ದಿನ ಕನ್ನಡ, ಅರೇಬಿಕ್ ಭಾಷೆ ಪರೀಕ್ಷೆಗಳು ನಡೆಯಲಿವೆ.
ೆ.28ರಿಂದ ಮಾ.17ರವರೆಗೆ ನಡೆದಿದ್ದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು 6,94,545 ವಿದ್ಯಾರ್ಥಿಗಳ ಪೈಕಿ 5,66,608 ಮಂದಿ ಉತ್ತೀರ್ಣರಾಗಿದ್ದು ಶೇ.81.58 ರಷ್ಟು ಫಲಿತಾಂಶ ದಾಖಲಾಗಿತ್ತು. ಮೊದಲ ಬಾರಿಗೆ ಪ್ರೆಷರ್ಸ್ ಕೂಡ ಶೇ.86.48ರಷ್ಟು ಉತ್ತೀರ್ಣರಾಗಿದ್ದರು.
ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪರೀಕ್ಷೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.