ಚನ್ನರಾಯಪಟ್ಟಣ ತಾಲೂಕು ಛಾಯಾಗ್ರಾಹಕ ಶೃಜನ್ ಪ್ರಭಾಕರ್ ಅವರಿಗೆ ಗಣ್ಯರು ಬಹುಮಾನ ವಿತರಿಸಿದರು.
- ವಿಶ್ವ ಆನೆ ದಿನಾಚರಣೆ
- ಛಾಯಾಚಿತ್ರ ಸ್ಪರ್ಧೆ
ಗುಂಡ್ಲುಪೇಟೆಯ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಶೃಜನ್ ಪ್ರಭಾಕರ್‌ಗೆ ದ್ವಿತೀಯ ಬಹುಮಾನ ಲಭಿಸಿದೆ.
ಶೃಜನ್ ಪ್ರಭಾಕರ್ ಅವರು ಭರತ್‌ಪುರದ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿದ ಜೌಗುಪ್ರದೇಶದ ಪಕ್ಷಿಗಳ ಪಿಸುಮಾತು ಎಂಬ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ದೊರೆತಿದೆ.
ಜಾಗತಿಕ ಹುಲಿ ದಿನಾಚರಣೆ 2025ರ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆಯೋಜಿಸಿದ್ದ ಛಾಯಾಗ್ರಹಣ ಸ್ಪರ್ಧೆಗೆ ಸಲ್ಲಿಸಲಾದ ಛಾಯಾಚಿತ್ರಗಳನ್ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್ ಹಾಗೂ ಸೇನಾನಿ ತೀರ್ಪುಗಾರರಾಗಿದ್ದರು. ಈ ಪ್ರಶಸ್ತಿಯನ್ನು 2026ರ ವಿಶ್ವ ಆನೆ ದಿನಾಚರಣೆಯಂದು ಪ್ರದಾನ ಮಾಡಲಾಯಿತು.
ಜೌಗುಪ್ರದೇಶದ ಪಕ್ಷಿಗಳ ಪಿಸುಮಾತು ಛಾಯಾಚಿತ್ರಕ್ಕೆ ದೊರೆತ ಈ ಪ್ರಶಸ್ತಿ ಶೃಜನ್ ಪ್ರಭಾಕರ್ ಅವರ ಪ್ರಯತ್ನಕ್ಕೆ ದೊರೆತ ಮತ್ತೊಂದು ಮಹತ್ವದ ಗೌರವವಾಗಿದೆ. ವನ್ಯಜೀವಿ ಸಂರಕ್ಷಣೆ, ಪರಿಸರದ ಮಹತ್ವ ಹಾಗೂ ಆನೆಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶಪ್ರಸಾದ್, ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್, ಕೆಎಡಿಎ ಮಾಜಿ ಅಧ್ಯಕ್ಷ ಎಚ್.ಎನ್.ನಂಜಪ್ಪ, ವನ್ಯಜೀವಿ ಮಂಡಳಿ ಸದಸ್ಯೆ ಸೀಮಾ ಖಲೀಲ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಭಾರ ಕ್ಷೇತ್ರ ನಿರ್ದೇಶಕ ಶ್ರೀಶುಭಂ, ಜೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಡಾ.ಮಹಾದೇವಮ್ಮ, ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಮಲ್ಲೇಶಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್, ಪರಮೇಶ್, ಮಂಜುನಾಥ್ ಇತರರಿದ್ದರು.