ಶಿವಶಂಕರಪ್ಪ ಸಾಹುಕಾರ್, ಗೀತಾ  
ರಾಜ್ಯ

ಸಾಹುಕಾರ್ ಬ್ಯಾಂಕ್​ ಖಾತೆ ಜಾಲಾಟ

2021ರಿಂದ ಬ್ಯಾಂಕ್ ವ್ಯವಹಾರಗಳ ತನಿಖೆ, ಗೀತಾ ಅಪಾರ್ಟ್‌ಮ್ಮೆಂಟ್ ಲಕ್ಷ ಬಾಡಿಗೆ ಕಟ್ಟಿತ್ತಿದ್ದ ಸಾಹುಕಾರ್ , ಯಾರದ್ದೋ ದುಡ್ಡು.. ಯಲ್ಲಮ್ಮನ ಜಾತ್ರೆ

ಬೆಂಗಳೂರು: ರಾಜ್ಯದ ಅದೇಷ್ಟೋ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆ ಪಡೆದುಕೊಳ್ಳಬೇಕೆಂಬ ಕನಸು ಹೊಂದಿರುವ ಉದ್ಯೋಗ ಸೌಧದ ಕಚೇರಿಯನ್ನು ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿಕೊಂಡು ಕರಾಳ ಕೂಪಕ್ಕೆ ತಳ್ಳಿದ್ದಾರೆ.

ಸಂವಿಧಾನಿಕವಾಗಿ ರಚನೆಯಾಗಿರುವ ಆಯೋಗದ ಘನತೆ, ಗೌರವಕ್ಕೆ ಧಕ್ಕೆ ಬರುವಂತೆ ಮಾಡಿರುವ ಆರೋಪಿಗಳು ಲೂಟಿ ಮಾಡುವ ಉದ್ದೇಶದಿಂದಲೇ ಖಾಲಿ ಹುದ್ದೆಗಳ ನೇಮಕಾತಿಗೆ ತ್ವರಿತಗತಿಯಲ್ಲಿ ಅಧಿಸೂಚನೆ ಹೊರಡಿಸುತ್ತಿರುವುದನ್ನು ಇಡಿ ಅಧಿಕಾರಿಗಳು ಬಯಲು ಮಾಡಿದ್ದಾರೆ.

ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ.ಗೀತಾ ಕರ್ಮಕಾಂಡ ಕೆದಕುತ್ತಿರುವ ಅಧಿಕಾರಿಗಳು, 2021ರಿಂದ ಈ ಇಬ್ಬರು ಹೊಂದಿರುವ ವಿವಿಧ ಬ್ಯಾಂಕ್ ಖಾತೆಗಳ ವಿವರದ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

2021ರಿಂದ ತನಿಖೆ ಶುರು:

ಪಶುವೈದ್ಯಾಧಿಕಾರಿಗಳ ಪರೀಕ್ಷೆ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆಗಸ್ಟ್ 18ರಂದು ನಡೆಸಿದ್ದ ಇಡಿ ದಾಳಿ ಸಂದರ್ಭದಲ್ಲಿ, ಸಾಹುಕಾರ್ ಪಿಎ ಮೋಹನ್‌ಕುಮಾರ್ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ಆತನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ, ಸಾಹುಕಾರ್ ಅಭ್ಯರ್ಥಿಗಳಿಂದ ಡೀಲ್ ಮಾಡಿಕೊಂಡಿದ್ದ ಲಕ್ಷ ಲಕ್ಷ ಹಣ ಪಿಎ ಮೂಲಕ ಸಾಹುಕಾರ್ ಖಜಾನೆ ಸೇರುತ್ತಿತ್ತು. ಈ ಎಲ್ಲ ವಿವರಗಳು ಮೋಹನ್ ವಾಟ್ಸ್‌ಪ್‌ನಿಂದಲೇ ಪತ್ತೆಯಾಗಿತ್ತು.

ಸಾಹುಕಾರ್ ಲಕ್ಲಷ ಕ್ಷ ಬಾಡಿಗೆ ಹಣ ಪಾವತಿ:

ಸಂಜಯನಗರದ ಡಾಲರ್ಸ್ ಕಾಲನಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಸದಸ್ಯೆ ಬಿ.ವಿ ಗೀತಾ ಕೂಡ ಉಳಿದುಕೊಂಡಿದ್ದರು. ಪ್ಲ್ಯಾಟ್ ಮಾಲೀಕ ಚಂದ್ರಹಾಸ್, ಗೀತಾ ಮತ್ತು ಅವರ ಪುತ್ರಿ ಹೆಸರಿನಲ್ಲಿ ಹಂತ ಹಂತವಾಗಿ ಸಾಹುಕಾರ್ ಹಣ ವರ್ಗಾವಣೆ ಮಾಡಿದ್ದಾರೆ. ಪ್ಲ್ಯಾಟ್ ಬಾಡಿಗೆಯ ಹಣ ಸಾಹುಕಾರ್ ಅವರೇ ಪಾವತಿ ಮಾಡುತ್ತಿದ್ದರೂ ಎಂಬುದು ಇಡಿ ತನಿಖೆ ವೇಳೆ ತಿಳಿದು ಬಂದಿದೆ.

ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತೆ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಪಡೆದಿದ್ದಾರೆ. ಇಡಿ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳ ಪ್ರಕಾರ, ಶಿವಶಂಕರಪ್ಪ ಸಾಹುಕಾರ್ ವಾರ್ಷಿಕ ಗೀತಾ ಅವರ ಪುತ್ರಿ ಹೆಸರಿನಲ್ಲಿ ಐಷಾರಾಮಿ ಬಾಡಿಗೆ ಪ್ಲ್ಯಾಟ್‌ಗೆ ಲಕ್ಷಾಂತರ ರೂ. ಪಾವತಿ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ 2021ರಿಂದ 2022ರ ಅವಧಿಯ 9 ಕಂತುಗಳಲ್ಲಿ ಒಟ್ಟು 10,86,500 ರೂ. ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ.

ವಿದೇಶಿ ಪ್ರವಾಸಕ್ಕೆ ಪ್ಲೈಟ್ ಟಿಕೆಟ್:

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಿಸಿಯನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಮಧ್ಯವರ್ತಿ ಕನ್ನಾಳೆ ಮೂಲಕ ವಿಮಾನ ಟಿಕೆಟ್ ಬುಕ್ ಮಾಡಿಸಿರುವ ಮಾದರಿಯಲ್ಲಿ, ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ವಿದೇಶಿ ಪ್ರವಾಸ ಕೈಗೊಳ್ಳಲು ಪ್ಲೈಟ್ ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದೆ. ಸಾಹುಕಾರ್ ಪಿಎ ಹಾಗೂ ಏಜೆಂಟರ್‌ಗಳ ಮೂಲಕ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿಸಿರುವ ಮಾಹಿತಿಯನ್ನು ಇಡಿ ಸಂಗ್ರಹಿಸಿದೆ.

ಪ್ಲ್ಯಾಟ್ ಮಾಲೀಕ ಚಂದ್ರಹಾಸ್ ಖಾತೆಗೆ

2023 ಫೆಬ್ರುವರಿ ತಿಂಗಳಲ್ಲಿ 22,500

ಅದೇ ದಿನ ಅದೇ ಖಾತೆಗೆ 45,000

6-12-2022ರಲ್ಲಿ ಚಂದ್ರಹಾಸ್ ಖಾತೆಗೆ 45 ಸಾವಿರ

8-11-2022ರಲ್ಲಿ ಚಂದ್ರಹಾಸ್ ಖಾತೆಗೆ 45 ಸಾವಿರ

6-09-2022ರಲ್ಲಿ 45 ಸಾವಿರ ಸಂದಾಯ

1-10-2022 ರಲ್ಲಿ ಗೀತಾ ಖಾತೆಗೆ 5 ಲಕ್ಷ

1-02-2022 ರಲ್ಲಿ ಗೀತಾ ಖಾತೆಗೆ 3 ಲಕ್ಷ

28-06-2023 ರಲ್ಲಿ ಗೀತಾ ಪುತ್ರಿ ಖಾತೆಗೆ 40 ಸಾವಿರ

29-05-2023 ರಲ್ಲಿ ಗೀತಾ ಪುತ್ರಿ ಖಾತೆಗೆ 44 ಸಾವಿರ ರೂ. ಸಂದಾಯವಾಗಿದೆ.