ಕಲಬುರಗಿ ಎನ್​ವಿ ಪದವಿ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿನ ವಸ್ತುಪ್ರದರ್ಶವನ್ನು ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್​ ಜಹಾಗೀರದಾರ್​, ಪ್ರೊ.ವಾಮನ್​ ಗಾಜರೆ, ಪ್ರೊ.ಗೋವಿಂದ ಪೂಜಾರ್​, ದೇಶಪಾಂಡೆ, ವಿಜಯಕುಮಾರ ಕುಲಕರ್ಣಿ ಇತರರು ವೀಕ್ಷಿಸಿದರು. 
ರಾಜ್ಯ

ವೈಜ್ಞಾನಿಕ ಮನೋಭಾವ ಇಂದಿನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಪ್ರೊ.ವಾಮನ್​ ಗಾಜರೆ ಹೇಳಿಕೆ
  • ನೂತನ ವಿದ್ಯಾಲಯ ಪದವಿ ಕಾಲೇಜಿನಲ್ಲಿ ವಿಜ್ಞಾನ ಮೇಳ
ಕಲಬುರಗಿ: ದೈನಂದಿನ ಜೀವನದಲ್ಲಿ ವಿಜ್ಞಾನದ ಅನ್ವಯಿಕತೆ ಮತ್ತು ವೈಜ್ಞಾನಿಕ ಮನೋಭಾವ ಅಗತ್ಯ ಎಂದು ಸೇಡಂ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವಾಮನ್​ ಗಾಜರೆ ಹೇಳಿದರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ರಸಾಯನಶಾಸ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಇತ್ತೀಚಿಗೆ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ತಂತ್ರಾಜ್ಞಾನ ಯುಗದಲ್ಲಿ ಕೇವಲ ಭಾವನಾತ್ಮಕ ಬದುಕಿಗಿಂತ ಪ್ರಾಯೋಗಿಕ ಹಾಗೂ ವೈಚಾರಿಕ ಬದುಕು ಅಗತ್ಯವಾಗಿದೆ. ವೈಾನಿಕ ಚಿಂತನೆ ವ್ಯಕ್ತಿಯ ತಾರ್ಕಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಯೋಗಾತ್ಮಕ ಅಧ್ಯಯನ, ಸಂಶೋಧನಾ ಮನೋವೃತ್ತಿ ಹಾಗೂ ನವೀನ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಪ್ರೊ.ಗಾಜರೆ ಸಲಹೆ ನೀಡಿದರು.
ಎನ್​ವಿ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರ ಪ್ರೊ.ಯು.ಜಿ.ಸರದೇಶಪಾಂಡೆ ಅವರು, ಗೃಹ ವಿಾನ, ಪೌಷ್ಠಿಕಾಂಶ, ಆಹಾರ ಸಂರಣೆ ಮತ್ತು ಆರೋಗ್ಯ ವಿಜ್ಞಾನಗಳ ಪ್ರಸ್ತುತತೆ ವಿವರಿಸಿದರು. ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಗೋವಿಂದ ಪೂಜಾರ್​ ಅಧ್ಯಕ್ಷತೆ ವಹಿಸಿದ್ದರು.
ವಿಜ್ಞಾನ ಮೇಳದಲ್ಲಿ ಸುಮಾರು 20 ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಮಾದರಿಗಳು, ರಾಸಾಯನಿಕ ಪ್ರಕ್ರಿಯೆ, ಶಕ್ತಿ ಪರಿವರ್ತನೆ, ಪರಿಸರ ಸಂರಣೆ, ಜಲಶುದ್ಧೀಕರಣ ಸೇರಿ ಹಲವು ವಿಷಯಾಧಾರಿತ ಪ್ರಯೋಗಗಳನ್ನು ಪ್ರದರ್ಶಿಸಿದರು.
ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್​ ಜಹಗೀರದಾರ್​ ಹಾಗೂ ಸಂಸ್ಥೆಯ ಸದಸ್ಯರು ಮೇಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಜ್ಞಾನಿಕ ಮಾದರಿ ಮತ್ತು ಪ್ರಯೋಗ ವೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಶ್ರೀಕರ್​ ಮತ್ತು ಕರಣ್​ ವಿಾನ ಮೇಳದ ಅನುಭವ ಹಂಚಿಕೊಂಡರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ನಂದಿನಿ ಪ್ರಾರ್ಥನಾ ಗೀತೆ ಹಾಡಿದರು. ರಸಾಯನಶಾಸ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಆಯೋಜಕಿ ಡಾ.ಅಶ್ವಿನಿ ಕೆ.ಆರ್​. ನಿರೂಪಿಸಿದರು. ಪ್ರೊ.ಭಾರತಿ ಎಸ್​.ಆರ್​.ವಂದಿಸಿದರು.
"

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜಾಗೃತಿ ಹಾಗೂ ನವೋದ್ಯಮಶೀಲತೆ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಈ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚು ಗಮನಹರಿಸುವುದರ ಜತೆಗೆ ವೈಜ್ಞಾನಿಕ ಚಿಂತನೆ ಮಾಡಬೇಕು.

— ಡಾ.ಗೌತಮ್​ ಜಹಾಗೀರದಾರ್​, ಅಧ್ಯಕ್ಷ, ಎನ್​ವಿ ಸಂಸ್ಥೆ, ಕಲಬುರಗಿ.