Scientific measures are necessary to control Parthenium.
ಪಾರ್ಥೇನಿಯಂ ವೇಗವಾಗಿ ಹರಡುವ ಆಕ್ರಮಣಕಾರಿ ಕಳೆ ಗಿಡ. ಇದನ್ನು ವೈಾನಿಕ ರೀತಿಯಲ್ಲಿ ನಿಯಂತ್ರಿಸಬೇಕು ಎಂದು ಜಿಕೆವಿಕೆಯ ಸಂಪನ್ಮೂಲ ವ್ಯಕ್ತಿ ಡಾ.ಕೆ.ಎನ್.ಗೀತಾ ಸಲಹೆ ನೀಡಿದರು.
ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಾನ ಕೇಂದ್ರವು (ಜಿಕೆವಿಕೆ) ಕೈಗೊಂಡಿದ್ದ ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಾದ್ಯಂತ ಆಗಸ್ಟ್ನಲ್ಲಿ ಪಾರ್ಥೇನಿಯಂ ಜಾಗೃತಿ ವಾರ ಆಚರಿಸುವ ಮೂಲಕ ಜನರಲ್ಲಿ ಕಳೆಗಿಡಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ರಸ್ತೆ ಬದಿಗಳು ಹಾಗೂ ಖಾಲಿ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಂಡು ಸೂಕ್ತ ಸಮಗ್ರ ಕಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು. ಇದರ ಮೂಲಕ ಪಾರ್ಥೇನಿಯಂ ಮುಕ್ತ ಗ್ರಾಮ ನಿರ್ಮಾಣ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪಾರ್ಥೇನಿಯಂ ಗುರುತಿಸುವಿಕೆ, ಕೃಷಿ ಬೆಳೆಗಳ ಮೇಲಿನ ದುಷ್ಪರಿಣಾಮ, ಮಾನವ ಹಾಗೂ ಜಾನುವಾರುಗಳ ಆರೋಗ್ಯಕ್ಕೆ ಮಾರಕ, ಪರಿಸರ ಹಾನಿಯ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಗಂಗರೆಕಾಲುವೆ ಗ್ರಾಮದಲ್ಲಿ ಗ್ರಾಮೀಣ ಯುವಕರು ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಲು, ಸ್ವಾವಲಂಬಿ ಜೀವನೋಪಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಇದರ ಅಂಗವಾಗಿ ಬೇಕರಿ ಉತ್ಪನ್ನಗಳ ತಯಾರಿಕೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಮಾರ್ಗದರ್ಶನ ನೀಡಲಾಯಿತು.
ಉತ್ಪನ್ನಗಳ ತಯಾರಿಕೆಯ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟ ನಿರ್ವಹಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಉತ್ಪಾದನಾ ವೆಚ್ಚ ಮತ್ತು ಲಾಭಾಂಶ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಹೆಚ್ಚುವರಿ ಆದಾಯಗಳಿಕೆ, ಬೇಕರಿ ಉತ್ಪನ್ನಗಳ ತಯಾರಿಕೆಯ ಮೂಲಕ ಸ್ವಯಂ ಉದ್ಯೋಗಾವಕಾಶ ಸೃಷ್ಟಿ ವಿಚಾರವಾಗಿ ರೈತರು, ಮಹಿಳೆಯರು ಮಾಹಿತಿ ಪಡೆದುಕೊಂಡರು.
ಕೇಕು, ತೆಂಗಿನ ಕುಕ್ಕೀಸ್ ಜತೆಗೆ ಬೇಕರಿ ಉತ್ಪನ್ನಗಳ ತಯಾರಿಕೆಯ ಪ್ರಾಯೋಗಿಕ ವಿಧಾನಗಳನ್ನು ತಿಳಿಸಿಕೊಡಲಾಯಿತು.