ಆಳಂದ ತಾಲೂಕಿನ ಭೂಸನೂರಿನಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಹಮ್ಮಿಕೊಂಡ ಗಡಿನಾಡು ಕನ್ನಡಿಗರ ಉತ್ಸವ ಸಮಾರಂಭವನ್ನು ಬಸವರಾಜ ಪಡುಕೋಟೆ ಉದ್ಘಾಟಿಸಿದರು. ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಶ್ರೀ ಹವಾ ಮಲ್ಲಿನಾಥ ಮಹಾರಾಜ, ಸಿದ್ಧೇಶ್ವರ ಹಿರೇಮಠ, ಗಣೇಶರಾವ ಕೇಸರ್ಕರ, ರಮೇಶ ಜಗತಿ ಇತರರಿದ್ದರು.
- ಬಸವರಾಜ ಪಡುಕೋಟೆ ಕಳವಳ
- ಭೂಸನೂರಿನಲ್ಲಿ ಗಡಿನಾಡು ಕನ್ನಡಿಗರ ಉತ್ಸವ
ಆಳಂದ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡಕ್ಕೆ ಧಕ್ಕೆ ಬಂದರೆ ಧ್ವನಿ ಎತ್ತುವ ಕೆಲಸ ಮಾಡಬೇಕಿದೆ. ಸಂಟನೆಯೂ ನಾಡು, ನುಡಿ, ಜಲ ಜತೆಗೆ ರೈತರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಎಂ.ಬಸವರಾಜ ಪಡುಕೋಟೆ ಹೇಳಿದರು.
ಭೂಸನೂರಿನ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಡಿನಾಡು ಕನ್ನಡಿಗರ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಉಳಿಸಲು ಸಾಕಷ್ಟು ಹೋರಾಟ ನಡೆಯುತ್ತಿದೆ. ಕನ್ನಡಿಗರಲ್ಲಿ ಏಕತೆ ಮೂಡಿಸುವುದರ ಜತೆಗೆ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ನಟ ಗಣೇಶರಾವ ಕೇಸರ್ಕರ ಮಾತನಾಡಿದರು. ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ಚವದಾಪುರಿ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಭೂಸನೂರಿನ ಶ್ರೀ ಬಸವಲಿಂಗ ಶಿವಾಚಾರ್ಯ, ಧುತ್ತರಗಾಂವ್ದ ಶರಣೆ ಸಿದ್ಧಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಶರಣಬಸಪ್ಪ ಮುನೋಳ್ಳಿ, ನಾಗರಾಜ ಚಾಕನಹಳ್ಳಿ, ಭೀಮಣ್ಣ ಶಖಾಪುರ, ವೀರಣ್ಣ ಮಂಗಾಣೆ, ಜಗನ್ನಾಥ ಶೇಗಜಿ, ಅಶೋಕ ಗುತ್ತೇದಾರ್, ವೀರೇಂದ್ರ ಶೇಗಜಿ, ಗುರುಶರಣ ಪಾಟೀಲ್, ಬಾಬುರಾವ ಪಾಟೀಲ್, ರಾಜಶೇಖರ ಯಂಕಂಚಿ, ಸಿದ್ದು ಹಿರೋಳ್ಳಿ, ಮುತ್ತಣ್ಣ ಬೀಳಗಿ ಇತರಿರದ್ದರು. ಸಂಟನಾ ಕಾರ್ಯದರ್ಶಿ ರಮೇಶ ಜಗತಿ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರಿಂದ ಸಾಂಸತಿಕ ಹಾಗೂ ಸಂಗೀತ ರಸ ಮಂಜರಿ ನಡೆಯಿತು.