ಹಾಬಾಳ(ಟಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪಾಲಕರು-, ಶಿಕ್ಷಕರ ಮಹಾಸಭೆ, ಹಳೆಯ ವಿದ್ಯಾರ್ಥಿಗಳ ಸಂಗಮ, ಶೈಕ್ಷಣಿಕ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಓದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸತ್ಕರಿಸಲಾಯಿತು. ವಿಜಯಕುಮಾರ ತೇಗಲತಿಪ್ಪಿ, ಬಸವರಾಜ ಸಾಗರ್, ಮುಡಬಿ ಗುಂಡೇರಾವ, ನಾಗೇಂದ್ರಪ್ಪ ತಿರುಮಲ್ ಇತರರಿದ್ದರು. ========
ಸೇಡಂ: ಸಮಾಜದಲ್ಲಿ ತಲೆ ಎತ್ತಿ ಬದುಕು ನಡೆಸಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದೆ. ಶಾಲೆಗಳು ಭವ್ಯ ಭಾರತದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕೇಂದ್ರಗಳಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಹಾಬಾಳ(ಟಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪಾಲಕರು-&ಶಿಕ್ಷಕರ ಮಹಾಸಭೆ, ಹಳೆಯ ವಿದ್ಯಾರ್ಥಿಗಳ ಸಂಗಮ, ಶೈಕ್ಷಣಿಕ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ನಗರಗಳಲ್ಲಿ ಕನ್ನಡ ಕ್ರಮೇಣ ಮಾಯವಾಗುತ್ತ ಸಾಗಿದೆ. ಇಂತಹದರಲ್ಲೂ ಕನ್ನಡ ಗಟ್ಟಿಯಾಗಿ ನಿಂತಿರುವುದಕ್ಕೆ ಗ್ರಾಮೀಣ ಭಾಗದ ಜನ ಮತ್ತು ಸರ್ಕಾರಿ ಶಾಲೆಗಳೇ ಕಾರಣ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಸಾಗರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪರಿಣತ ಶಿಕ್ಷಕರಿರುತ್ತಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದರ ಜತೆ ಪಾಲಕರು ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಮುಡಬಿ ಗುಂಡೇರಾವ ಪ್ರಾಸ್ತಾವಿಕ ಮಾತನಾಡಿ, ಉತ್ತಮ ಕಲಿಕೆಯಿಂದ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಎಸ್ಡಿಎಂಸಿ ಅಧ್ಯಕ್ಷ ನಾಗೇಂದ್ರಪ್ಪ ತಿರುಮಲ್, ಕಸಾಪ ಚಿಂಚೋಳಿ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಪತ್ರಕರ್ತ ಅವಿನಾಶ ಬೋರಂಚಿ, ಪ್ರಮುಖರಾದ ಸುಧೀರ ಬಿರಾದಾರ, ಗಂಗಾಧರ ಗೌಳಿ, ಆರತಿ ಬಳಗಾರ, ಸುವರ್ಣಲತಾ ಹಲಚೇರಿ, ಪದ್ಮಾವತಿ ರೊಟ್ಟಿ, ದರಿಯಾ ಪಟೇಲ್, ಮಹೇಶ ಪೂಜಾರಿ, ಚೆನ್ನಾರೆಡ್ಡಿ ಸಾಹುಕಾರ, ರಮೇಶ ಮುದ್ದಣಿ, ದೇವಪ್ಪ ಪೂಜಾರಿ, ವಿಜಯಕುಮಾರ ತಳವಾರ, ಮಹಿಶಪ್ಪ ಮಸ್ತಿ, ಆಶಪ್ಪ ಮದ್ದೂರ ಇದ್ದರು. ದೇವಿಂದ್ರಪ್ಪ ತೆಲ್ಕೂರ ಸ್ವಾಗತಿಸಿದರು. ಜಗದೇವಿ ನಿರೂಪಣೆ ಮಾಡಿದರು. ಶಿವಕುಮಾರ ಜುಲ್ಪಿ ವಂದಿಸಿದರು.
ಬಿಆರ್ಪಿ ಶಿವಕುಮಾರ ಬಟಗೇರಾ, ಜಿಪಿಟಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಲಕ್ಷ$್ಮಣ ರಂಜೋಳಕರ್ ಮಾತನಾಡಿದರು. ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಹಳೆಯ ವಿದ್ಯಾರ್ಥಿಗಳಾದ ಸುರೇಶ, ಓಂಕಾರ, ಐಮದ್ ಬಳಗಾರ, ಶಿವಕುಮಾರ ಜುಲ್ಪಿ, ಮಲ್ಲಿಕಾರ್ಜುನ, ಸೈಯದ್ ಯೂನುಸ್, ಸಮ್ರಿನ್ ಬಾನು, ನಾಗಮ್ಮ ಜುಲ್ಪಿ, ಜಗಪ್ಪ ಪೂಜಾರಿ, ವಾಣಿಶ್ರೀ ಹಡಪದ ಅವರನ್ನು ಸತ್ಕರಿಸಲಾಯಿತು.