ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ-ಕಾಲೇಜು ಸಂಸತ್ ಚುವಾವಣೆಯಲ್ಲಿ ಮಂತ್ರಿಮಂಡಲಕ್ಕೆ ಆಯ್ಕೆಯಾದವರನ್ನು ಅಭಿನಂದಿಸಲಾಯಿತು.
- ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ
- ಸಂಸತ್ ಚುನಾವಣೆ
ಹನೂರು: ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂಸತ್ ಚುನಾವಣೆಯಲ್ಲಿ ಕಾಲೇಜು ವಿಭಾಗದಿಂದ ಮಧು ಹಾಗೂ ಶಾಲಾ ವಿಭಾಗದಿಂದ ನಿಶ್ಚಿತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ಮತದಾನದ ಬಗ್ಗೆ ಅರಿವು, ನಾಯಕತ್ವ ಹಾಗೂ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಶಾಲಾ ಹಾಗೂ ಕಾಲೇಜು ಸಂಸತ್ ಚುನಾವಣೆ ನಡೆಸಲಾಯಿತು. ಹೆಚ್ಚು ಮತ ಪಡೆದ ಕಾಲೇಜಿನ ಮಧು ಹಾಗೂ ಶಾಲೆಯ ನಿಶ್ಚಿತ್ ನಾಯಕರಾಗಿ ಆಯ್ಕೆಯಾದರು.
ಎಂ.ಮಿಥುನ್ ಗೃಹ ಸಚಿವೆ, ಎಂ. ಶ್ವೇತಾಶ್ರೀ ಕ್ರೀಡೆ ಸಚಿವೆ, ಅಭಿನಯಾ ಸಾಂಸ್ಕೃತಿಕ ಸಚಿವೆ, ವಿ.ರುಚಿತಾ ಆರೋಗ್ಯ ಸಚಿವೆ ಹಾಗೂ ಕೆ.ಟಿ ಹಂಸಾ ಪ್ರವಾಸೋದ್ಯಮ ಸಚಿವೆಯಾಗಿ ನೇಮಿಸಿ ಕಾಲೇಜು ಮಂತ್ರಿ ಮಂಡಲವನ್ನು ರಚಿಸಲಾಯಿತು.
ಶಾಲಾ ವಿಭಾಗದಿಂದ ಯು.ಜೆ.ಶ್ರೀಆದ್ಯಾ ಉಪ ನಾಯಕಿ, ಎನ್. ಶೋಭಿತಾ ಶಿಕ್ಷಣ ಸಚಿವೆ, ಎಂ.ಬಸವೇಶ್ ಉಪ ಸಚಿವ, ಪಿ. ಸಮರ್ಥ್ ಶಿಸ್ತು ಸಮಿತಿ ಸಚಿವ, ಎಚ್.ಎಸ್.ಗಗನ್‌ಗೌಡ ಉಪ ಸಚಿವ, ಕಾರ್ತಿಕ್ ಕ್ರೀಡಾ ಸಚಿವ, ಟಿ.ಆರ್ ಸುಜಾತಾ ಉಪ ಸಚಿವೆ, ಪಿ. ಪೃಥ್ವಿ ಸಾಂಸ್ಕೃತಿಕ ಸಚಿವ, ಆರ್.ಹರಿಣಿ ಉಪ ಸಚಿವೆ, ಜೆ.ಹರ್ಷ ಆರೋಗ್ಯ ಸಚಿವ, ಬಿ.ಟಿ ಮೋನಿಕಾ ಉಪ ಸಚಿವೆ, ಗುರುಪ್ರಿಯಾ ಪರಿಸರ ಸಂರಕ್ಷಣಾ ಸಚಿವೆ, ಎಂ.ರಜತ್ ಉಪ ಸಚಿವ, ಆರ್.ದಿವ್ಯಾ ಪ್ರವಾಸೋದ್ಯಮ ಸಚಿವೆ, ಎನ್. ಕೃತಿಕಾ ಉಪ ಸಚಿವೆ ಹಾಗೂ ಬಿ. ಲಿಪಿಕಾ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ನೇಮಕ ಮಾಡಿ ಪ್ರಮಾಣ ವಚನ ಬೋಧಿಸಲಾಯಿತು. ಕದಂಬ, ಗಂಗ, ಚಾಲುಕ್ಯ ಹಾಗೂ ಹೊಯ್ಸಳ ತಂಡ ರಚಿಸಿ ಜವಬ್ದಾರಿಯನ್ನು ಹಂಚಿಕೆ ಮಾಡಲಾಯಿತು.
ಸಂಸ್ಥೆ ಸಂಚಾಲಕ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಪ್ರಾಂಶುಪಾಲ ಮಧುಸೂದನ್, ಮುಖ್ಯ ಶಿಕ್ಷಕರಾದ ಸುಮತಿ ಹಾಗೂ ಸತ್ಯಪ್ರಿಯಾ ಇದ್ದರು.