ವೀರತಿಮ್ಮನಹಳ್ಳಿ ಸರ್ಕಾರಿ ಶಾಲೆ School 
ರಾಜ್ಯ

ಮಕ್ಕಳ ಆತಂಕ ಕೇಂದ್ರವಾದ ಶಾಲೆ School

ಪ್ರಮುಖ ಮುಖ್ಯಾಂಶಗಳು

  • ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿತ
  • 1 ಮತ್ತು 3ನೇ ತರಗತಿಗೆ ವಿದ್ಯಾರ್ಥಿಗಳೇ ಇಲ್ಲ!
ಶ್ರೀನಿವಾಸಪುರ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೇಂದ್ರವಾಗಬೇಕಿದ್ದ ಸರ್ಕಾರಿ ಶಾಲೆ ಮಕ್ಕಳ ಆತಂಕದ ಮನೆಯಾದಾಗ ಮಕ್ಕಳಿಗೆ ಮತ್ತು ಪಾಲಕರಿಗೆ ಯಾವಾಗಲೂ ಸುರಕ್ಷತೆಯದ್ದೇ ಚಿಂತೆ. ಶಿಥಿಲಾವಸ್ಥೆ ತಲುಪಿದ ಕೋಣೆಯಲ್ಲಿ ಪಾಠ ಮತ್ತು ಅಡುಗೆ ಮಾಡುವಾಗ ಏನಾದರೂ ಅವಡಗಳಾದರೆ ಯಾರು ಹೊಣೆ ಎಂಬ ಯಕ್ಷಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.
ಶ್ರೀನಿವಾಸಪುರ ತಾಲೂಕು ವೀರತಿಮ್ಮನಹಳ್ಳಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿನ ಅಡುಗೆ ಕೋಣೆ ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಮಳೆ ಬಂದರೆ ಕೊಠಡಿ ಸೋರುತ್ತಿದೆ. 8 ಮಂದಿ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ ಇದ್ದಾರೆ. ಮೂಲ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಶಾಲೆ ಮುಚ್ಚುವ ಸ್ಥಿತಿ ನಿಮಾರ್ಣವಾಗಿದೆ ಎಂದು ಪಾಲಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹೊದಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರತಿಮ್ಮನಹಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ ಶೋಚನೀಯವಾಗಿದ್ದು, ಅನ್ನಪೂರ್ಣೇಶ್ವರಿ ದಾಸ್ತಾನು ಅಡುಗೆ ಕೋಣೆ ಶಿಥಿಲಗೊಂಡಿರುವ ಕಾರಣ ಬೀಗ ಜಡಿಯಲಾಗಿದೆ. ಶಾಲಾ ಕಟ್ಟಡದ ಪಕ್ಕದಲ್ಲಿರುವ ಮತ್ತೊಂದು ಕೊಠಡಿಯಲ್ಲಿ ದಾಸೋಹ ಇಲಾಖೆಯಿಂದ ಸರಬರಾಜಾಗುವ ಅಕ್ಕಿ, ಬೇಳೆ, ತರಕಾರಿ ಇತರೆ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಲಾಗುತ್ತಿದೆ. ಮಳೆ ಬಂದರೆ ಕಟ್ಟಡದ ಮೇಲ್ಭಾಗ ಸೋರುತ್ತದೆ. ಅಡುಗೆ ಕೋಣೆ ನಿಮಾರ್ಣ, ಶೌಚಗೃಹ, ಕಾಂಪೌಂಡ್​ ನಿಮಾರ್ಣಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿಗೆ, ಶಿಕ್ಷಣ ಇಲಾಖೆಗೆ ಪ್ರತಿವರ್ಷ ಅರ್ಜಿ ನೀಡಿದ್ದರೂ ಯಾರೂ ಕೂಡ ತಿರುಗಿ ನೋಡದಿರುವುದು ವಿಪರ್ಯಾಸವೇ ಸರಿ.
ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರು ವಾಸವಾಗಿದ್ದು, School ಸುಮಾರು 5,0-60 ಕುಟುಂಬಗಳು ವಾಸವಿವೆ. ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೂ ದಾಖಲಾತಿಗೆ ಅವಕಾಶವಿದ್ದು, ಈ ವರ್ಷ 1ನೇ ತರಗತಿಗೆ ದಾಖಲಾತಿಯೇ ಇಲ್ಲ. 2ನೇ ತರಗತಿಗೆ ಇಬ್ಬರು, ಮೂರನೇ ತರಗತಿಗೆ ದಾಖಲಾತಿ ಇಲ್ಲ, ನಾಲ್ಕನೇ ತರಗತಿಗೆ 5 ಮಂದಿ, 5ನೇ ತರಗತಿಗೆ ಒಬ್ಬರು ಸೇರಿ ಒಟ್ಟು 8 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮುಂದಿನ ವರ್ಷದಲ್ಲಿ 4 ವಿದ್ಯಾರ್ಥಿಗಳು 5ನೇ ತರಗತಿ ಮುಗಿಸಿ 6ನೇ ತರಗತಿಗೆ ಮತ್ತೊಂದು ಶಾಲೆಗೆ ಹೋದಾಗ ಶಾಲೆ ಮುಚ್ಚುವುದು ಗ್ಯಾರಂಟಿಯಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಾಲೂಕಿನಲ್ಲಿ ಬಹುತೇಕ ಶಾಲೆಗಳು ಸಿದ್ಧವಾಗುತ್ತಿವೆ.
ಸುಮಾರು 26 ವರ್ಷಗಳಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಒಬ್ಬ ಶಿಕ್ಷಕ ನಿವೃತ್ತಿ ಪಡೆದಿದ್ದಾರೆ. ಈಗ ನಾನೊಬ್ಬನೇ ಇದ್ದೀನಿ. ಈ ವರ್ಷ ಒಂದನೇ ತರಗತಿಗೆ ದಾಖಲಾತಿ ಇಲ್ಲವೇ ಇಲ್ಲ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ನಾನು ಮುಂದಿನ 2 ವರ್ಷದಲ್ಲಿ ನಿವೃತ್ತಿ ಪಡೆಯುತ್ತಿದ್ದೇನೆ. ನಿವೃತ್ತಿಯಾದ ನಂತರ ದಾಖಲಾತಿ ಮತ್ತು ಕಟ್ಟಡದ ಸಮಸ್ಯೆಯಿಂದ ಶಾಲೆ ಮುಕ್ತಾಯ ಪಡೆಯಬಹುದೆನೋ ಎಂದು ನೋವನ್ನು ವ್ಯಕ್ತಪಡಿಸಿದರು.
- ನಾರಾಯಣರೆಡ್ಡಿ
ಶಿಕ್ಷಕ
ಶಾಲೆಗೆ ಅಡುಗೆ ಕೋಣೆ ಅವಶ್ಯ ಇದ್ದು, ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದು ನರೇಗ ಯೋಜನೆಯಡಿ ಸುಸಜ್ಜಿತ ಪ್ರತ್ಯೇಕ ಅಡುಗೆ ಕೋಣೆ ನಿರ್ಮಿಸಲು ಸೂಚಿಸುತ್ತೇನೆ.
- ಸುಲೋಚನಾ
ಸಹಾಯಕ ನಿರ್ದೇಶಕಿ
ಕೂಡಲೇ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ಪಟ್ಟಿ ಮಾಡಿ ಜರೂರಾಗಿ ಅಡುಗೆ ಕೋಣೆ, ಕಾಂಪೌಂಡ್​ ಮತ್ತು ಶೌಚಗೃಹ ದುರಸ್ತಿ ಕಾಮಗಾರಿ ಪೂರ್ಣ ಮಾಡಲು ಮುಂದಾಗುತ್ತೇವೆ.
- ದೇವಲಪಲ್ಲಿ ಶ್ರೀನಿವಾಸ್​
ಗ್ರಾಮ ಪಂಚಾಯಿತಿ ಅಧ್ಯಕ್ಷ