ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪಬ್ಲಿಕ್ ಶಾಲೆ (ಸಿಬಿಎಸ್ಇ)ಯಲ್ಲಿ ನಡೆದ ಶಾಲಾ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಸಂಸ್ಥೆ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲಿ ಮತ್ತು ಸುನಿಲ್ ರಾಯವಾಡೆ, ನಿರ್ದೇಶಕರಾದ ಈರಣ್ಣ ಹಲಶೆಟ್ಟೆ, ಮಲ್ಲಿಕಾರ್ಜುನ ಚಿರಡೆ, ಪ್ರಾಚಾಯೆರ್ ಮಂಜುಶಾ ಖಂಡಾಳೆ ಇದ್ದರು.
ಬಸವಕಲ್ಯಾಣ: ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪಬ್ಲಿಕ್ ಶಾಲೆ (ಸಿಬಿಎಸ್ಇ)ಯಲ್ಲಿ ಬುಧವಾರ ನಡೆದ ಶಾಲಾ ಪರಿಷತ್ ಚುನಾವಣೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಹೆಡ್ ಬಾಯ್, ಹೆಡ್ ಗರ್ಲ್, ವೈಸ್ ಹೆಡ್ ಗರ್ಲ್, ವೈಸ್ ಹೆಡ್ ಬಾಯ್, ಸ್ಪೋರ್ಟ್ಸ್ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ರೆಡ್, ಗ್ರೀನ್, ಬ್ಲೂ, ಎಲ್ಲೊ, ಹೌಸ್ ಕ್ಯಾಪ್ಟನ್, ಹೌಸ್ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ, ಮಕ್ಕಳಿಗೆ ಪುಸ್ತಕದ ಪಠ್ಯಕ್ರಮವನ್ನು ಕಲಿಸುವುದರ ಜತೆಗೆ ಪ್ರಾಯೋಗಿಕವಾಗಿ ಈ ರೀತಿ ಚುನಾವಣೆ ನಡೆಸುವುದು ಉತ್ತಮವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲಿ ಮತ್ತು ಸುನಿಲ್ ರಾಯವಾಡೆ, ನಿರ್ದೇಶಕರಾದ ಈರಣ್ಣ ಹಲಶೆಟ್ಟೆ, ಮಲ್ಲಿಕಾರ್ಜುನ ಚಿರಡೆ ಇದ್ದರು. ಪ್ರಾಚಾಯೆರ್ ಮಂಜುಶಾ ಖಂಡಾಳೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಯಕತ್ವದ ಪ್ರತಿಜ್ಞೆ ಭೋದಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಾದ ಶರಣು ಮತ್ತು ವಿಕಾಂಕ್ಷ ನಿರೂಪಣೆ ಮಾಡಿದರು. ಸಹ ಶಿಕ್ಷಕ ಪ್ರಸಾದ್ ಮಠಪತಿ ವಂದಿಸಿದರು.