ನಿರಂತರ ಆೃಪ್ ಹಾಜರಾತಿ 
ರಾಜ್ಯ

Niranthara mobile app attendance: ಮೊಬೈಲ್ ಫೋಟೋದಲ್ಲಿ ಶಾಲಾ ಮಕ್ಕಳ ಹಾಜರಾತಿ: ಕ್ರಮದ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ಇಲಾಖೆಯು ವಿದ್ಯಾರ್ಥಿಗಳ ಹಾಜರಾತಿಗಾಗಿ ‘ನಿರಂತರ ಆೃಪ್’ ಮೂಲಕವೇ ನಮೂದಿಸುವಂತೆ ಸೂಚಿಸಿದೆ.
  • ಆದರೂ ಕೆಲವು ಶಾಲೆಗಳಲ್ಲಿ ನಿರಂತರ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಪೋಟೋ ಕಾಪಿ ಮತ್ತು ಮೊಬೈಲ್‌ಗಳಲ್ಲಿರುವ ಪೋಟೋಗಳ ಮೂಲಕ ಹಾಜರಾತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ
  • ಒಂದು ವೇಳೆ ಇಂತಹ ಘಟನೆಗಳು ಕಂಡುಬಂದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಬಂಧಪಟ್ಟ ಶಿಕ್ಷಕರೇ ನೇರ ಹೊಣೆ
ಬೆಂಗಳೂರು:

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ‘ನಿರಂತರ ಆೃಪ್’ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಪೋಟೋ ಕಾಪಿ ಅಥವಾ ಮೊಬೈಲ್ ಫೋಟೋಗಳ ಮೂಲಕ ಹಾಜರಾತಿ ಹಾಕದಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಆನ್‌ಲೈನ್ ಸಭೆಯಲ್ಲಿ ಸೂಚನೆ ನೀಡಿರುವ ಅವರು, ಇಲಾಖೆಯು ವಿದ್ಯಾರ್ಥಿಗಳ ಹಾಜರಾತಿಗಾಗಿ ‘ನಿರಂತರ ಆೃಪ್’ ಮೂಲಕವೇ ನಮೂದಿಸುವಂತೆ ಸೂಚಿಸಿದೆ. ಆದರೂ ಕೆಲವು ಶಾಲೆಗಳಲ್ಲಿ ನಿರಂತರ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಪೋಟೋ ಕಾಪಿ ಮತ್ತು ಮೊಬೈಲ್‌ಗಳಲ್ಲಿರುವ ಪೋಟೋಗಳ ಮೂಲಕ ಹಾಜರಾತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ಇಲಾಖೆಯ ಮೇಲಧಿಕಾರಿಗಳು ತಂತ್ರಾಂಶದ ಮೂಲಕ ಗುರುತಿಸಿದ್ದು, ನಿರಂತರ ತಂತ್ರಾಂಶದಲ್ಲಿ ಫೋಟೋ ಕಾಪಿ ಮತ್ತು ಮೊಬೈಲ್ ಫೋಟೋಗಳನ್ನು ಅಪ್‌ಲೋಡ್ ಮಾಡಿ ಹಾಜರಾತಿ ಹಾಕಬಾರದು. ಒಂದು ವೇಳೆ ಇಂತಹ ಘಟನೆಗಳು ಕಂಡುಬಂದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಬಂಧಪಟ್ಟ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಎಲ್ಲ ತಾಲೂಕು ಹಂತದ ಅನುಷ್ಠಾನ ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಮಾಡುವುದರೊಂದಿಗೆ ‘ನಿರಂತರ ತಂತ್ರಾಂಶ’ದಲ್ಲಿ ನೈಜ ನೋಂದಣಿ ಮತ್ತು ಹಾಜರಾತಿ ನಮೂದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕರಿಗೂ ಸೂಚನೆ ನೀಡಿದ್ದಾರೆ.