Dr. Eshwar Ullagaddi 
ರಾಜ್ಯ

ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಶಾಲೆಯ ಮಾನ್ಯತೆ ರದ್ದು

ಧಾರವಾಡ: ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆ- 2 ಮತ್ತು 3ನ್ನು ನಡೆಸಲು ಎಲ್ಲ ಶಾಲೆಗಳು ಪ್ರಮಾಣಿತ ಕಾರ್ಯಚರಣಾ ವಿಧಾನವನ್ನು (ಎಸ್​ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು. ಅನುದಾನಿತ ಪ್ರೌಢಶಾಲೆಗಳು ಗೌಪ್ಯತೆ ಕಾಪಾಡದೆ, ಪ್ರಶ್ನೆಪತ್ರಿಕೆಗಳನ್ನು ಬಹಿರಂಗಪಡಿಸಲು ಕಾರಣರಾವಾದರೆ ಮಾನ್ಯತೆ ಹಾಗೂ ಅನುದಾನ ಹಿಂಪಡೆಯಲಾಗುವುದು. ಅದೇರೀತಿ ಅನುದಾನ ರಹಿತ ಶಾಲೆಗಳು ಗೌಪ್ಯತೆ ಕಾಪಾಡದಿದ್ದರೆ ಶಾಲೆಯ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ಅಕ್ರಮ ಎಸಗುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಎಚ್ಚರಿಕೆ ನೀಡಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆ- 1ರಲ್ಲಿ ಕೆಲ ಶಾಲೆಯ ಮುಖ್ಯಾಧ್ಯಾಪಕರು ಪರೀಕ್ಷೆಗೂ ಮೊದಲೇ ಸೋರಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಿಇಎನ್​ ಠಾಣೆಯಲ್ಲಿ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಪೂರ್ವಸಿದ್ಧತಾ ಪರೀಕ್ಷೆ& 2ರ ಸಮಯ ಬದಲಾಗಿರುವುದನ್ನು ಮುಖ್ಯಾಧ್ಯಾಪಕರು ವಿದ್ಯಾಥಿರ್ಗಳಿಗೆ ಮಾಹಿತಿ ನೀಡಬೇಕು. ಪರೀಕ್ಷಾ ದಿನದಂದು ಬೆಳಗ್ಗೆ 9.15 ಗಂಟೆಗೆ ಮಂಡಳಿಯಿಂದ ಮುಖ್ಯಶಿಕ್ಷಕರ ಲಾಗಿನ್​ಗೆ ಪ್ರಶ್ನೆಪತ್ರಿಕೆ ಅಪ್​ಲೋಡ್​ ಮಾಡಲಾಗುವುದು. ಮುಖ್ಯಶಿಕ್ಷಕರೇ ಲಾಗಿನ್​ ಮಾಡಿ ಡೌನ್​ಲೋಡ್​ ಮಾಡಿಕೊಳ್ಳಬೇಕು.
ವಿದ್ಯಾಥಿರ್ಗಳು ಬೆಳಗ್ಗೆ 9ಕ್ಕೆ ಪರೀಾ ಕೇಂದ್ರಕ್ಕೆ ಹಾಜರಾಗಬೇಕು. ಮೊಬೈಲ್​, ಪುಸ್ತಕ ಮತ್ತು ಗೈಡ್​ಗಳನ್ನು ತರಬಾರದು. ದಿಕ್ಕು ತಪ್ಪಿಸಲು ಕಿಡಿಗೇಡಿಗಳು ಪರೀೆ ಮೊದಲೇ ಪ್ರಶ್ನೆಪತ್ರಿಕೆ ನೀಡಿದರೆ ಸ್ವೀಕರಿಸಬಾರದು. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು.
ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಸಿದ್ಧತಾ ಪರೀಾ ಕಾರ್ಯದಲ್ಲಿ ಲೋಪವಾಗದದಂತೆ ನೀಡಿದ ಜವಾಬ್ದಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.