ಕಲಬುರಗಿಯ ಶರಣಬಸವ ವಿವಿ ಮಾಡಿಕೊಂಡ ಒಡಂಬಡಿಕೆ ಪತ್ರವನ್ನು ವಿವಿ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಕೆಎಸ್ಸಿಎಸ್ಟಿಯ ಕಾರ್ಯದರ್ಶಿ ಪ್ರೊ.ಅಶೋಕ ರಾಯಚೂರು ಬುಧವಾರ ವಿನಿಮಯ ಮಾಡಿಕೊಂಡರು. ಪ್ರೊ.ಅನೀಲಕುಮಾರ ಬಿಡವೆ, ಡಾ.ಶಿವಕುಮಾರ ಜವಳಗಿ ಇತರರಿದ್ದರು.
- ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸಮಾಧಾನ ಕೌನ್ಸೆಲಿಂಗ್ ಸೆಂಟರ್ನೊಂದಿಗೆ ಒಪ್ಪಂದ
ಕಲಬುರಗಿ: ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಶ್ರೇಷ್ಠತೆ ಹೆಚ್ಚಿಸುವುದು ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಪೂರಕವಾಗುವ ಹೊಸ ಪ್ರಮಾಣಪತ್ರ ಕೋರ್ಸ್ ಆರಂಭಿಸುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಎರಡು ಮಹತ್ವದ ತಿಳಿವಳಿಕೆ ಒಡಂಬಡಿಕೆಗಳಿಗೆ ಬುಧವಾರ ಸಹಿ ಹಾಕಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಹಾಗೂ ಶರಣಬಸವ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆಗೆ ಕೆಎಸ್ಸಿಎಸ್ಟಿ ಕಾರ್ಯದರ್ಶಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪೊ.ಅಶೋಕ ಎಂ. ರಾಯಚೂರ ಮತ್ತು ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಸಹಿ ಹಾಕಿದರು.
ಮತ್ತೊಂದೆಡೆ, ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಪರವಾಗಿ ಖ್ಯಾತ ಮನೋವಿಾನಿ ಹಾಗೂ ಪದ್ಮಶ್ರೀ ಪುರಸತ ಡಾ. ಸಿ.ಆರ್. ಚಂದ್ರಶೇಖರ್ ಮತ್ತು ಡಾ.ಲಕ್ಷ್ಮೀ ಪಾಟೀಲ್ ಮಾಕಾ ಮತ್ತೊಂದು ಒಡಂಬಡಿಕೆಗೆ ಸಹಿ ಹಾಕಿದರು.
ಉಪಕುಲಪತಿ ಪೊ.ಅನಿಲಕುಮಾರ ಬಿಡವೆ ಮಾತನಾಡಿ, ಕೆಎಸ್ಸಿಎಸ್ಟಿ ಒಡಂಬಡಿಕೆಯನ್ವಯ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಘಟಕ ಸ್ಥಾಪಿಸಲಾಗುವುದು. ಐಪಿಆರ್ಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಎಸ್ಸಿಎಸ್ಟಿ ತಾಂತ್ರಿಕ ನೆರವು ನೀಡಲಿದ್ದು, ಜಂಟಿ ಕಾರ್ಯಾಗಾರ, ತರಬೇತಿ ಕಾರ್ಯಕ್ರಮ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಆಯೋಜಿಸಲು ಸಹಕರಿಸಲಿದೆ ಎಂದರು.
ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣಿ, ಸಂಭಾವ್ಯ ನವೀನ ಆವಿಷ್ಕಾರಗಳ ಗುರುತಿಸುವಿಕೆ ಹಾಗೂ ಅವುಗಳನ್ನು ವಾಣಿಜ್ಯೀಕರಣಗೊಳಿಸುವ ಪ್ರಕ್ರಿಯೆಗೂ ಕೆಎಸ್ಸಿಎಸ್ಟಿ ಮಾರ್ಗದರ್ಶನ ನೀಡಲಿದೆ. ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಐಪಿಆರ್ ಕುರಿತು ಜಾಗೃತಿ ಮೂಡಿಸಲು ನಿಯಮಿತವಾಗಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಡೀನ್ ಡಾ.ಶಿವಕುಮಾರ ಜವಳಗಿ ಇತರರಿದ್ದರು.
50 ಗಂಟೆಗಳ ಕೌನ್ಸೆಲಿಂಗ್ ಕೋರ್ಸ್
ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಒಡಂಬಡಿಕೆಯನ್ವಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ 50 ಗಂಟೆ ಅವಧಿಯ ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್ ತಣದಿಂದ ಜಾರಿಗೆ ಬರುವಂತೆ ಆರಂಭಿಸಲಾಗುವುದು. ಕೋರ್ಸ್ಗೆ ಕನಿಷ್ಠ 20 ವರ್ಷ ವಯಸ್ಸು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಕಡ್ಡಾಯವಾಗಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಕೋರ್ಸ್ನಲ್ಲಿ ನೇರ ಸಂವಾದಾತ್ಮಕ ತರಗತಿ, ಮೇಲ್ವಿಚಾರಣೆಯ ಆನ್ಲೈನ್ ತರಗತಿಗಳು, ಡಿಜಿಟಲ್ ಕಲಿಕಾ ಟಕಗಳು ಹಾಗೂ ಪ್ರಾಯೋಗಿಕ ಕಾರ್ಯಾಗಾರಗಳನ್ನು ಒಳಗೊಂಡಿರಲಿದೆ. ಸಮಾಧಾನ ಕೌನ್ಸೆಲಿಂಗ್ ಸೆಂಟರ್ನ ವಿಷಯ ತರು ವಿಶೇಷ ಪಠ್ಯಕ್ರಮ ರೂಪಿಸಿ ತರಬೇತಿ ನೀಡಲಿದ್ದು, ಶಾಲೆ, ಕಾಲೇಜು ಹಾಗೂ ಸಮಾಜದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಬಲ್ಲ ತರಬೇತಿ ಪಡೆದ ಕೌನ್ಸೆಲರ್ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ.
ಎಸ್ಬಿ ವಿಶ್ವವಿದ್ಯಾಲಯ ಮತ್ತು ಕೆಎಸ್ಸಿಎಸ್ಟಿ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ರಸುವ, ಉತ್ತೇಜಿಸುವ ಮತ್ತು ಮತ್ತಷ್ಟು ವಿಸ್ತರಿಸುವ ಕ್ರಮ ಕೈಗೊಳ್ಳಲಿವೆ. ಇದರಿಂದ ಹೊಸ ಬೌದ್ಧಿಕ ಆಸ್ತಿಗಳ ಸೃಷ್ಟಿಗೆ ಉತ್ತೇಜನ ದೊರೆಯಲಿದೆ.
— > ಪೊ.ಅನಿಲಕುಮಾರ ಬಿಡವೆ, ಉಪಕುಲಪತಿ, ಶರಣಬಸವ ವಿಶ್ವವಿದ್ಯಾಲಯ