ಸುಕ್ಷೇತ್ರ ಮೈಲಾರದಲ್ಲಿ ಬುಧವಾರ ಸಂಜೆ ಗೋಧೂಳಿ ಸಮಯದಲ್ಲಿ ತಾಲೂಕಿನ ಡೆಂಕನಮರಡಿಯಲ್ಲಿ ಕಾರ್ಣಿಕದ ರಾಮಣ್ಣಗೊರವಯ್ಯ 15 ಅಡಿ ಎತ್ತರದ ಬಿಲ್ಲನೇರಿ ನೆರೆದಿದ್ದ ಲಕ್ಷಾಂತರ ಭಕ್ತರಿಗೆ ಸದ್ದಲೇ. ಎಂದು ಕಾರ್ಣಿಕ ನುಡಿದರು
- ಮೂರನೇ ಬಾರಿ ಪುನರಾವರ್ತನೆಗೊಂಡ ಕಾರ್ಣಿಕ
ಹೂವಿನಹಡಗಲಿ (ವಿಜಯನಗರ): ಸಂಪಾಯಿತಲೇ ಪರಾಕ್.. ಇದು ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ.
ಸುಕ್ಷೇತ್ರ ಮೈಲಾರದಲ್ಲಿ ಬುಧವಾರ ಸಂಜೆ ಗೋಧೂಳಿ ಸಮಯದಲ್ಲಿ ತಾಲೂಕಿನ ಡೆಂಕನಮರಡಿಯಲ್ಲಿ ಕಾರ್ಣಿಕದ ರಾಮಣ್ಣಗೊರವಯ್ಯ 15 ಅಡಿ ಎತ್ತರದ ಬಿಲ್ಲನೇರಿ ನೆರೆದಿದ್ದ ಲಕ್ಷಾಂತರ ಭಕ್ತರಿಗೆ ಸದ್ದಲೇ. ಎಂದು ಕೂಗಿ ನಂತರ ಮೇಲಿನಂತೆ ಕಾರ್ಣಿಕ ನುಡಿದರು. ಗೊರವಯ್ಯನ ದೇವವಾಣಿ ಕೇಳಿದ ಭಕ್ತ ಸಮುಹ ಕೇಕೆ ಹಾಕುತ್ತಲೇ ಶ್ರೀ ಸ್ವಾಮಿ ಮೈಲಾರಲಿಂಗೇಶ್ವರನ ಘೋಷವಾಕ್ಯ ಕೂಗಿದರು.
ಈ ಬಾರಿಯ ಕಾರ್ಣಿಕವನ್ನು ನೆರೆದಿದ್ದ ಭಕ್ತರು ವಿವಿಧ ಬಗೆಯಲ್ಲಿ ವಿಶ್ಲೇಷಿಸಿದರು. ನಾಡಿನಲ್ಲಿ ಮಳೆ, ಬೆಳೆ ಸಮೃದ್ಧವಾಗಿ ಜನ ಸುಖ-ಸಂತೋಷದಿಂದ ಜೀವನ ನಡೆಸಲಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಫಸಲು ಬಂದು ರೈತರಿಗೆ ದೊರಕುವುದು. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಭದ್ರವಾಗಿ ಆಡಳಿತ ನಡೆಸುತ್ತವೆ ಎಂದು ನೆರೆದಿದ್ದ ಜನರಲ್ಲಿ ವಿಶ್ಲೇಷಣೆ ನಡೆದಿದೆ.
ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿದರು. 2020 ಹಾಗೂ 2024 ರಲ್ಲಿ ಈ ಮೇಲಿನಂತೆ ಕಾರ್ಣಿಕ ನುಡಿಯಲಾಗಿತ್ತು ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ಜನರು ಸುಖದಿಂದ ಇದ್ದರು ಎಂದು ನೆರೆದಿದ್ದ ಜನರು ಮಾತನಾಡಿಕೊಂಡರು
ಈ ಸಂದರ್ಭದಲ್ಲಿ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ವಿವಿಧ ಮಠಗಳ ಮಠಾಧೀಶರು ಇತರರಿದ್ದರು.