ಮದ್ದೂರಿನ ಶ್ರೀರಾಮಂದಿರ ಪಾರ್ಕ್ ಬಳಿ ಮಂಗಳವಾರ ಸಾಲು ಮರದ ತಿಮ್ಮಕ್ಕ ಅಭಿಮಾನಿಗಳ ಬಳಗದ ವತಿಯಿಂದ ಸಾಲು ಮರದ ತಿಮ್ಮಕ್ಕನವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿ.ತಿಮ್ಮಯ್ಯ, ಮುರುಳಿ, ಆಲೂರು ಚೆನ್ನಪ್ಪ, ಸಿ.ಅರ್.ರಾಜು, ಪ್ರಕಾಶ್ ಇದ್ದರು. 
ರಾಜ್ಯ

ಮರಗಳನ್ನು ಬೆಳೆಸಿ ಪ್ರಕೃತಿ ಉಳಿಸಿ

ಎಂ.ರವಿ
ಮದ್ದೂರು: ಸಾಲು ಮರದ ತಿಮ್ಮಕ್ಕನವರಿಗಿದ್ದ ಪ್ರಕೃತಿ ಪ್ರೀತಿ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಡಿ.ತಿಮ್ಮಯ್ಯ ತಿಳಿಸಿದರು.
ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀರಾಮಂದಿರ ಪಾರ್ಕ್ ಬಳಿ ಮಂಗಳವಾರ ಸಾಲು ಮರದ ತಿಮ್ಮಕ್ಕ ಅಭಿಮಾನಿಗಳ ಬಳಗದ ವತಿಯಿಂದ ಸಾಲು ಮರದ ತಿಮ್ಮಕ್ಕನವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ನೂರಾರು ಮರಗಳನ್ನು ನಿಸ್ವಾರ್ಥ ಮನೋಭಾವದಿಂದ ಬೆಳೆಸಿ ವೃಕ್ಷಮಾತೆ ಅನಿಸಿಕೊಂಡ ಸಾಲು ಮರದ ತಿಮ್ಮಕ್ಕ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ. ಅವರಂತೆ ನಾವು ಕೂಡ ಮರಗಳನ್ನು ಬೆಳೆಸಲು ಮತ್ತು ಪ್ರಕೃತಿ ಉಳಿಸಲು ಮುಂದಾದಬೇಕೆಂದರು.
ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ರಾಜು, ನಿವೃತ್ತ ಅಧಿಕಾರಿ ಪ್ರಕಾಶ್, ನಿವೃತ್ತ ಶಿಕ್ಷಕ ಆಲೂರು ಚೆನ್ನಪ್ಪ, ಮುಖಂಡರಾದ ಮುರುಳಿ, ಸಂತೋಷ್, ದೊಡ್ಡಿಬೀದಿ ಪ್ರಕಾಶ್, ಎಂ.ಎಸ್.ಜಯಕುಮಾರ್, ಅನಿಲ್, ಕೆ.ಸುರೇಶ್ ಇತರರು ಇದ್ದರು.