ಮುದೇನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
ರಾಮದುರ್ಗ: ಇಂದಿನ ಆಧುನಿಕ ಯುಗದಲ್ಲಿ ಜನರಲ್ಲಿ ಧಾರ್ಮಿಕ ಆಚಾರ&ವಿಚಾರ ಕಡಿಮೆಯಾಗುತ್ತಿದೆ. ಇಂತಹ ಪೂಜಾ ಕಾರ್ಯಕ್ರಮ ಮೂಲಕ ಧಾರ್ಮಿಕ ಪ್ರಜ್ಞೆ ಹೆಚ್ಚಾಗಿ ಗ್ರಾಮಗಳ ಮಧ್ಯೆ ಉತ್ತರೋತ್ತರವಾಗಿ ಶ್ರೇಯಸ್ಸು ವೃದ್ಧಿಯಾಗಲಿ ಎಂದು ಬನ್ನೂರ ಚಿಕ್ಕಮಠದ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮುದೇನೂರ ಗ್ರಾಮದಲ್ಲಿ ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನ ಸಮಿತಿ, ಪ್ರಗತಿ ಬಂಧು ಸ್ವ ಸಹಾಯ ಸಂಗಳ ಒಕ್ಕೂಟ, ಗ್ರಾಪಂ ಮೂದೇನೂರ, ಕೃಷಿ ಪತ್ತಿನ ಸಹಕಾರಿ ಸಂ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ
ಗ್ರಾಮ ಸುಭೀೆಗಾಗಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಷ್ಣುವಿನ ಅವತಾರವಾದ ಸತ್ಯನಾರಾಯಣನಿಗೆ ಭಕ್ತಿ ಸಮರ್ಪಿಸಿ, ಈ ಭಾಗದ ನೂರಾರು ಭಕ್ತರಿಗೆ ಪೂಜೆಯ ಲ ಲಭಿಸುವಂತಾಗಲಿ ಎಂದರು.
ಭಾಜಪಾ ಮಂಡಲ ಅಧ್ಯ ಡಾ.ಕೆ.ವಿ.ಪಾಟೀಲ ಮಾತನಾಡಿ, ಸರ್ಕಾರ ಮಾಡದಿರುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುದೇನೂರ ಗ್ರಾಮದ ಕಿರೇಸೂರ ಮಠದ ಗೌರಿಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುದೇನೂರ ಗ್ರಾಪಂ ಅಧ್ಯೆ ಅವನ್ನೆವ್ವ ದೇವಕ್ಕನವರ ಸಮಾರಂಭದ ಅಧ್ಯತೆ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಶಿಕ ಎಸ್.ವಿ.ಕಲ್ಯಾಣಶೆಟ್ಟಿ ಉಪನ್ಯಾಸ ನೀಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ್ ಮಾತನಾಡಿ, ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಪಿ.ಎ್.ಪಾಟೀಲ, ಬಸವರಾಜ ಹಿರೇರಡ್ಡಿ, ಸಿ.ಬಿ.ಪಾಟೀಲ, ಆನಂದರಡ್ಡಿ ಹಕಾಟಿ, ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯ ಜನಕರಡ್ಡಿ ಹಕಾಟಿ, ಅಧ್ಯ ಗೌಡಪ್ಪಗೌಡ ಪಾಟೀಲ, ಸದಸ್ಯ ಬಸಲಿಂಗಪ್ಪ ಹರಗುಟಗಿ, ಶಿವನಗೌಡ ಪವಾಡಿಗೌಡ್ರ, ರಾಚಪ್ಪ ಬ್ಯಾಳಿ, ಅಶೋಕ ಕುಲಗೋಡ ಇತರರಿದ್ದರು.