ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸಂಜಯ ಕಡ್ಲಿಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಹಾದೇವ ಹಾಲಳ್ಳಿ, ಸುಭಾಸ ಬೆಟಗೇರಿ ಮತ್ತಿತರರಿದ್ದಾರೆ.
- ಡಾ.ಸಂಜಯ ಕಡ್ಲಿಮಟ್ಟಿ ಹೇಳಿಕೆ
- ಆಯುರ್ವೇದ ಜೀವನದ ವಿಜ್ಞಾನ
ವಿಜಯಪುರ: ಆಯುರ್ವೇದ ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದಲ್ಲದೇ, ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನದ ಮೂಲಕ ಆರೋಗ್ಯಕ್ಕೆ ಜೀವನ ಶೈಲಿಯನ್ನು ಉತ್ತೇಜಿಸುವ ಜೀವನದ ವಿಜ್ಞಾನವಾಗಿದೆ ಎಂದು ಬಿಎಲ್‌ಡಿಇ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮುಖ್ಯ ಅಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದರು.
ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ಹಿರಿಯ ನಾಗರಿಕರಿಗಾಗಿ ನಗರದ ವೀರಶೈವ ಲಿಂಗಾಯತ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾತ್ವಿಕ ಆಹಾರವನ್ನು ನಿಯಮಿತ ಪ್ರಮಾಣ ಹಾಗೂ ಸಮಯಕ್ಕೆ ಸರಿಯಾಗಿ ಸೇವಿಸುವುದು ದೇಹಕ್ಕೆ ಹಿತಕರ. ಆಯಾ ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳು, ಹಣ್ಣುಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ವೃದ್ಯಾಪ್ಯ ಎರಡನೇಯ ಬಾಲ್ಯವಸ್ಥೆ ಇದ್ದಂತೆ, ಕಾರಣ ವೃದ್ಯಾಪ್ಯದಲ್ಲಿ ಬರುವ ರೋಗಗಳ ನಿಯಂತ್ರಣಕ್ಕೆ - ಸಾತ್ವಿಕ ಆಹಾರ ಸೇವನೆ, ನಿಯಮಿತ ಯೋಗ, ವ್ಯಾಯಾಮ-ವಾಯು ವಿಹಾರ ಅಳವಡಿಸಿಕೊಳ್ಳಲು ಸಲಹೆ ನೀಡಿದರು,
ಸ್ಥಳೀಯ ಬಿಎಲ್‌ಡಿಇ ಆಯುರ್ವೇದ ಮಹಾವಿದ್ಯಾಲಯದ ಆಯುರ್ವೇದಿಕ ಕಾಲೇಜು ಆಸ್ಪತ್ರೆಯಲ್ಲಿ ಪಂಚಕರ್ಮ ಯೋಗ ಧ್ಯಾನ ಆಹಾರ ಪದ್ಧತಿ - ನಿಯಂತ್ರಣದ ಮೂಲಕ ಅಡ್ಡಪರಿಣಾಮ ವಿಲ್ಲದ ರೀತಿ ಚಿಕಿತ್ಸೆ ನೀಡಲಾಗುತ್ತದೆ. ಅದರ ಲಾಭ ಪಡೆಯುವಂತೆ ಕರೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಹಾದೇವ ಹಾಲಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಅನುಭವ ಆಯುರ್ವೇದ ವೈದ್ಯರ ಸಲಹೆಗಳನ್ನು ಪಾಲಿಸುವ ಮೂಲಕ ಜೀವನದ ಸಂಧ್ಯಾಕಾಲವನ್ನು ಆರೋಗ್ಯಕರವಾಗಿ ಕಳೆಯೋಣ ಎಂದರು.
ಸುಭಾಸ ಬೆಟಗೇರಿ ಸ್ವಾಗತಿಸಿದರು. ಬಿ.ಎಸ್. ಸಜ್ಜನ ಪ್ರಾರ್ಥಿಸಿದರು. ಶಶಿಧರ ಶಿರಹಟ್ಟಿ ನಿರೂಪಿಸಿದರು. ಜಗದೀಶ ಮೋಟಗಿ ವಂದಿಸಿದರು.
ವೀರಶೈವ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ, ಸಹದೇವ ನಾಡಗೌಡರ, ವಿಠಲ ತೇಲಿ, ಮ.ಗು. ಯಾದವಾಡ, ಅಕ್ಕಮಹಾದೇವಿ ಬುರ್ಲಿ, ಶಾರದಾ ಐಹೊಳ್ಳಿ, ವಿ.ಡಿ. ಐಹೊಳ್ಳಿ, ಎಂ.ಎಲ್. ಹಾಲಳ್ಳಿ, ಎಂ.ಬಿ. ಪಟ್ಟಣಶೆಟ್ಟಿ, ನರಸಪ್ಪ ಸಿಂಧೂರ, ಆರ್.ಜಿ. ಬ್ಯಾಕೋಡ, ಈರಣ್ಣ ಚಿಮ್ಮಲಗಿ, ಬಿ.ಟಿ. ಈಶ್ವರಗೊಂಡ ಮತ್ತಿತರರಿದ್ದರು.