ಯಡ್ರಾಮಿಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಶರಣಬಸವೇಶ್ವರ ಪುರಾಣ ಹಾಗೂ ವ್ಯಸನಮುಕ್ತ ಭಾರತ ಅಭಿಯಾನದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳನ್ನು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಡಾ.ಬಿ.ಕೆ.ಶಿವಲೀಲಾ ಸನ್ಮಾನಿಸಿದರು.
- ಬ್ರಹ್ಮಕುಮಾರಿ ಡಾ.ಶಿವಲೀಲಾ ಅನಿಸಿಕೆ
- ಯಡ್ರಾಮಿಯಲ್ಲಿ ಪುರಾಣ, ವ್ಯಸನಮುಕ್ತ ಭಾರತ ಅಭಿಯಾನ
ಯಡ್ರಾಮಿ: ಮನುಷ್ಯ ಜೀವನ ನಡೆಸಲು ಬೇಕಾದ ಎಲ್ಲ ಸಂಪತ್ತು, ಸವಲತ್ತು ಹೊಂದಿದ್ದಾನೆ. ಆದರೆ ಅವನಿಗೆ ಮನ@ಶಾಂತಿ ಇಲ್ಲದೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ಇದರಿಂದ ದೂರವಾಗಲು ಸತ್ಸಂಗ, ದ್ಯಾನದಲ್ಲಿ ತೊಡಗಿಕೊಳ್ಳಬೇಕು ಎಂದು ವ್ಯಸನಮುಕ್ತ ಭಾರತ ಅಭಿಯಾನ ಕಲಬುರಗಿ ಉಪವಲಯ ಸಂಚಾಲಕಿ ಬ್ರಹ್ಮಕುಮಾರಿ ಡಾ.ಶಿವಲೀಲಾ ಸಲಹೆ ನೀಡಿದರು.
ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಶರಣಬಸವೇಶ್ವರ ಪುರಾಣ ಹಾಗೂ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವ್ಯಸನಮುಕ್ತ ಭಾರತ ಅಭಿಯಾನದಲ್ಲಿ ಮಾತನಾಡಿ, ವ್ಯಸನ ಒಂದು ಮಾನಸಿಕ ರೋಗ. ಚಟಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗಲ್ಲ. ಬದಲಾಗಿ ಆರೋಗ್ಯ, ಸಂಪತ್ತು, ಸಂಬಂಧ, ನತೆಗೆ ಹಾನಿಯಿದೆ. ದುಶ್ಚಟಗಳಿಗೆ ಮನೆಯ ವಾತಾವರಣವೂ ಕಾರಣವಾಗಿದ್ದು, ಹೆಣ್ಣು ಮಕ್ಕಳು ಮನೆಯನ್ನು ಶುದ್ಧವಾಗಿಡಬೇಕು ಎಂದು ಹೇಳಿದರು.
ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಪೀಳಿಗೆ ಪಾರ್ಟಿ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗಂತಿ. ವ್ಯಸನದಿಂದ ಅನಾರೋಗ್ಯಕ್ಕೆ ತುತ್ತಾಗುವುದರ ಜತೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾನೆ. ಈ ಕುರಿತು ಅರಿವು ಮೂಡಿಸುವ ಸಲುವಾಗಿ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವ್ಯಸನಮುಕ್ತ ಭಾರತ ಅಭಿಯಾನ ಆರಂಭಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ, ಪ್ರಮುಖರಾದ ಬಿಕೆ ರೇಖಾ, ಜಗದೀಶ ಪಾಟೀಲ್, ಬಿಕೆ ಶರಣಬಸ್ಸಪ್ಪ ಹೀರಾ, ಬಿಕೆ ಶರಣಕುಮಾರ ಪಾಟೀಲ್, ಎನ್.ಆರ್.ಪಾಟೀಲ್, ಬಸವರಾಜ ಹೂಗಾರ, ಸಂಗನಗೌಡ ಪಾಟೀಲ್ ಗುಳ್ಯಾಳ, ನಾಗಣ್ಣ ಹಾಗರಗುಂಡಗಿ, ಚಂದ್ರಶೇಖರ ಪುರಾಣಿಕ, ರಾಚನಗೌಡ ಪಾಟೀಲ್ ಗುಳ್ಯಾಳ, ಬಾಬಾ ಫರೀದ್ ಮಳ್ಳಿಕರ್ ಇತರರಿದ್ದರು.
ಪರಿವಾರದ ಸಂತೋಷಕ್ಕಾಗಿ ಪುರುಷರು ದುಶ್ಚಟಗಳಿಂದ ದೂರವಿರಬೇಕು. ಭವ್ಯ ಸಂಸತಿ ಹೊಂದಿದ ನಮ್ಮ ಭಾರತ ದೇಶದಲ್ಲಿ ಈ ಮೊದಲು ಮನೆಗಳಲ್ಲಿ ಸಾದು&ಸತ್ಪುರಷರ ಭಾವಚಿತ್ರ ನೋಡುತ್ತಿದ್ದೇವು. ಈಗ ಅದರ ಬದಲಾಗಿ ಚಿತ್ರನಟರ ಭಾವಚಿತ್ರ ನೋಡುವಂತಾಗಿದೆ.
> ಬ್ರಹ್ಮಕುಮಾರಿ ಡಾ.ಶಿವಲೀಲಾ,
ಕಲಬುರಗಿ ಉಪವಲಯ ಸಂಚಾಲಕಿ, ವ್ಯಸನಮುಕ್ತ ಭಾರತ ಅಭಿಯಾನ