ಸತ್ಯ ಸಾಯಿ ಶಾಲೆ ಬಡ ಮಕ್ಕಳಿಗೆ ವರದಾನ children 
ರಾಜ್ಯ

ಸತ್ಯ ಸಾಯಿ ಶಾಲೆ ಬಡ ಮಕ್ಕಳಿಗೆ ವರದಾನ children

ನಗರಗೆರೆ: ಗುರುಗಳು ಪಾಠಗಳನ್ನು ಬೋಧಿಸುವವರಷ್ಟೇ ಅಲ್ಲ, ವಿದ್ಯಾರ್ಥಿಗಳ ಜೀವನವನ್ನು ಸರಿಯಾದ ದಾರಿಗೆ ನಡೆಸುವ ಮಾರ್ಗದರ್ಶಕರು ಎಂದು ಶಾಲೆ ಕಾರ್ಯದರ್ಶಿ ಸತ್ಯನಾರಾಯಣ ರಾವ್​ ಹೇಳಿದರು.children
ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿ ಸತ್ಯಸಾಯಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನ, ಶಿಕ್ಷಕ&ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊತ್ತಿರುತ್ತಾರೆ. ಆದ್ದರಿಂದ ಗುರುಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ.
ಸತ್ಯ ಸಾಯಿ ಪ್ರೌಢಶಾಲೆಯಲ್ಲಿ ಮಧುಸೂದನ ಸಾಯಿ ಅವರ ಆಶಯದಂತೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.ಈ ಸೇವೆಯಿಂದ ಆಂಧ್ರ ಗಡಿ ಭಾಗದ ಹಳ್ಳಿಗಳ ಅನೇಕ ಮಕ್ಕಳು ಶಿಕ್ಷಣ ಪಡೆದುಕೊಂಡಿದ್ದಾರೆ.ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ಬೆಳಗಿಸುವ ಕಾರ್ಯವನ್ನು ಈ ಶಾಲೆಯಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ಈ ಉಚಿತ ಶಿಕ್ಷಣ ಸೇವೆ ಆಂಧ್ರ ಗಡಿ ಭಾಗದ ಬಡ ಮಕ್ಕಳಿಗೆ ವರದಾನವಾಗಿದೆ.
ಗಡಿ ಭಾಗದ ಹಳ್ಳಿಗಳ ಮಕ್ಕಳಿಗೆ ಶಿಕ್ಷಣದ ಬೆಳಕನ್ನು ಹರಡುತ್ತಿರುವ ಸತ್ಯ ಸಾಯಿ ಶಾಲೆಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರ ಜೀವನದಲ್ಲಿ ಆಶಾಕಿರಣ ಮೂಡಿಸುತ್ತಿರುವ ಈ ಶಾಲೆ ಕಾರ್ಯ ಶ್ಲಾನೀಯವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಗೌರವದ ಮನೋಭಾವ ಬೆಳೆಸುವುದರ ಜತೆಗೆ ಗುರು&ಶಿಷ್ಯರ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರಿಗೆ ಸನ್ಮಾನಿಸಿದರು.