ಹುಲಸೂರಿನಲ್ಲಿ ಶನಿವಾರ ಮಾತಂಗ ಸಮಾಜದಿಂದ ಅಣ್ಣಾಭಾವು ಸಾಠೆ ಅವರ 106ನೇ ಜಯಂತಿ ಆಚರಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಗ್ರಾಪಂ ಮಾಜಿ ಅಧ್ಯಕ್ಷ ರಣಜಿತ ಗಾಯಕವಾಡ, ಮನ್ಸೂರ್ ದಾಲಜಿ, ಸಂತೋಷ ಗಾಯಕವಾಡ, ವೀರಣ್ಣ ಗವಾರೆ, ಶ್ರವಣ ಗಾಯಕವಾಡ, ಮನೋಜ ಸೂರ್ಯವಂಶಿ ಇತರರಿದ್ದರು
- ತಹಸೀಲ್ದಾರ್ ಶಿವಾನಂದ ಮೇತ್ರೆ ಅಭಿಮತ
- ಹುಲಸೂರಿನಲ್ಲಿ ಅಣ್ಣಾಭಾವು ಜಯಂತಿ
ಹುಲಸೂರು: ಲೋಕಶಾಹಿರ್ ಅಣ್ಣಾಭಾವು ಸಾಠೆ ಹಿಂದುಳಿದ ಹಾಗೂ ಶೋಷಿತ ವರ್ಗದ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರು ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದಲ್ಲಿ ಮಾತಂಗ ಸಮಾಜದಿಂದ ಶನಿವಾರ ಆಯೋಜಿಸಿದ್ದ ಲೋಕಶಾಹಿರ್ ಅಣ್ಣಾಭಾವು ಸಾಠೆ ಅವರ 106ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಣ್ಣಾಭಾವು ಸಾಠೆ ತಮ್ಮ ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಪ್ರಾರಂಭಿಸಿ ಹಿಂದುಳಿದ ಸಮಾಜಕ್ಕೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಂಡ ಮಹಾನ್ ಪುರುಷರಾಗಿದ್ದರು. ಅವರ ಜೀವನ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ ಮಾತನಾಡಿ, ಅಣ್ಣಾಭಾವು ಸಾಠೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಮಾಜದ ಮುಖಂಡ ರಾಜಕುಮಾರ ಜಾಧವ್ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಸದಸ್ಯರಾದ ಧನ್ನಾಜಿ ಸೂರ್ಯವಂಶಿ, ವಿದ್ಯಾಸಾಗರ ಬನ್ಸೂಡೆ, ಮನ್ಸೂರ್ ದಾವಲಜಿ, ಜಗನಾಥ ದೇಟ್ನೆ ಸಂತೋಷ ಗಾಯಕವಾಡ, ತಾಪಂ ಇಒ ಮಹಾದೇವ ಜಮ್ಮು, ಪಿಡಿಒ ವಿನಯ ಕುಮಾರ, ಪ್ರಮುಖರಾದ ಚಂದ್ರಕಾಂತ ದೇಟ್ನೆ, ವೀರಣ್ಣ ಗವರೆ, ಶ್ರವಣ ಗಾಯಕವಾಡ, ಸಂದೀಪ ಗವಾರೆ, ಮನೋಜ ಸೂರ್ಯವಂಶಿ, ಅನೀಲ, ತಾನಾಜಿ ಗವಾರೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಅಣ್ಣಾಭಾವು ಸಾಠೆ ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ ಅಣ್ಣಾಭಾವು ಸಾಠೆ ವೃತ್ತದಿಂದ ಮುಖ್ಯರಸ್ತೆ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಯಿತು.