ಚಿಂಚೋಳಿಯಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಸಿದ್ಧಪಡಿಸಿರುವ ಬಯಲು ಗ್ರಂಥಾಲಯಕ್ಕೆ ಬಿಜೆಪಿ ಮುಖಂಡ ಗೋಪಾಲರಾವ ಕಟ್ಟಿಮನಿ ಚಾಲನೆ ನೀಡಿದರು. ಸಾಗರ ಆನಂದಿ, ವಿಜಯರಾಜ ಕೊರಡಂಪಳ್ಳಿ, ಕಾಶಿನಾಥ ಬೀರನಳ್ಳಿ, ಸುನೀಲ ಸಲಗರ ಇದ್ದರು. 
ರಾಜ್ಯ

ದಲಿತ ಸಾಹಿತ್ಯದ ಶಿಲ್ಪಿಕಾರ ಸಾಠ

ಚಿಂಚೋಳಿ: ಮಾನವ ಮುಕ್ತಿಯ ಅವಿಷ್ಕಾರ, ದಲಿತ ಸಾಹಿತ್ಯದ ಶಿಲ್ಪಿಕಾರ ಹಾಗೂ ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ತಂದ ಶ್ರೇಷ್ಠ ಸಾಹಿತಿ ಅಣ್ಣಾಭಾವು ಸಾಠೆ ಎಂದು ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ ಬಣ್ಣಿಸಿದರು. ಬಸ್​ ನಿಲ್ದಾಣದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಬುಧವಾರ ಹಮ್ಮಿಕೊಂಡಿದ್ದ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಅವರ ಜನ್ಮದಿನ ಹಾಗೂ ಬಯಲು ಗ್ರಂಥಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, 11 ಪವಾಡ ಗೀತೆ, 3 ನಾಟಕ, 1 ಪ್ರವಾಸ ಕಥನ, 9 ಲಾವಣಿ ಗೀತೆ, 13 ವಗ ನಾಟಕಗಳು, 1 ಫಕೀರಾ, 2 ವಾರಣಾಚಿ ವಾ, 4 ಅವಧಿ, 5 ಆಲಗುಜ್​ ಅನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದು, ಅಪ್ಪಟ ಶಿಕ್ಷಣ ಪ್ರೇಮಿ, ಸಮಾಜದ ಸುಧಾರಕರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಅಪ್ಪು ಅಭಿಮಾನಿ ಬಳಗದ ಅಧ್ಯ ಸಾಗರ ಆನಂದಿ, ಪ್ರಮುಖರಾದ ವಿಜಯರಾಜ ಕೊರಡಂಪಳ್ಳಿ, ಕಾಶಿನಾಥ ಬೀರನಳ್ಳಿ, ಸುನೀಲ ಸಲಗರ ಇತರರಿದ್ದರು.