ಡಾ.ಸರಜೂ ಕಾಟ್ಕರ್ ಸತ್ಕಾರ 
ರಾಜ್ಯ

ಸಾಹಿತ್ಯ ಲೋಕಕ್ಕೆ ಸರಜೂ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ನೃಪತುಂಗ ಪ್ರಶಸ್ತಿ ವಿಜೇತ ಸರಜೂ ಕಾಟ್ಕರ್ ಅಭಿನಂದನೆ
  • ಬೆಳಗಾವಿ ಅಭಿಮಾನಿಗಳಿಂದ ಸತ್ಕಾರ
  • ಸರಜೂ ಸಾಧನೆಗೆ ಬಣ್ಣನೆ
ಸಾಹಿತ್ಯ ಲೋಕಕ್ಕೆ ಡಾ.ಸರಜೂ ಕಾಟ್ಕರ್ ಕೊಡುಗೆ ಅಪಾರ
| ಸಾಹಿತಿ ಬಸವರಾಜ ಜಗಜಂಪಿ ಶ್ಲಾಘನೆ | ಅಭಿನಂದನಾ ಸಮಾರಂಭ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಕನ್ನಡ ಸಾಹಿತ್ಯಲೋಕಕ್ಕೆ ಡಾ.ಸರಜೂ ಕಾಟ್ಕರ್ ಅವರ ಕೊಡುಗೆ ಅಪಾರವಾಗಿದೆ. ತಮ್ಮ ಕಾರ್ಯದ ಜೊತೆಗೆ ಹಲವಾರು ಹಿರಿ-ಕಿರಿಯ ಸಾಹಿತಿಗಳನ್ನು ಬೆಳೆಸಿರುವ ಕೀರ್ತಿ ಡಾ.ಸರಜೂ ಕಾಟ್ಕರ್ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಶ್ಲಾಘಿಸಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಚಂದ್ರಕಾತ ಕುಸನೂರ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಹಾಗೂ ಎಂ.ಕೆ.ಪಬ್ಲಿಸಿಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೃಪತುಂಗ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವುಗಳಲ್ಲಿ.
ಬೆಳಗಾವಿ ಸಾಹಿತಿಗಳನ್ನು ಬೆಳೆಸಿದೆ.ಇಂತಹ ಬೆಳಗಾವಿಗೆ ಬಂದ ಡಾ.ಸರಜೂ ಕಾಟ್ಕರ್ ಅವರ ಸಾಹಿತ್ಯ ಲೋಕದ ಸವ್ಯಸಾಚಿ ಎನಿಸಿದ್ದಾರೆ.
ಹಿರಿಯ ಕವಿ ಎಂ.ಎಸ್.ಐಎಚಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಜೂ ಕಾಟ್ಕರ್ ಅವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಬೆಳೆಸಿದ್ದಾರೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಆಶಿಸಿದರು.
ಸಾಹಿತಿಗಳಾದ ಬಿ.ಎಸ್.ಗವಿಮಠ,ಎಲ್.ಎಸ್.ಶಾಸ್ತ್ರಿ ಮಾತನಾಡಿ, 80 ಕೃತಿಗಳನ್ನು ಬರೆದಿರುವ ಸರಜೂ ಕಾಟ್ಕರ್ 35ಕ್ಕೂ ಹೆಚ್ಚು ಆಯ್ಕೆ ಸಮಿತಿಗಳಲ್ಲಿ ಕೆಲಸ ಮಾಡಿದ ಅಪರೂಪದ ಸಾಹಿತಿ, ಅವರಿಂದ ಸಾಹಿತ್ಯ ಲೋಕ ಇನ್ನಷ್ಟು ಬೆಳಗಲಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅಪರೂಪದ ಸಾಧಕರು. ಅವರನ್ನು ಅನುಮಾನಿಸುವ ಸಂದರ್ಭದಲ್ಲಿ ಸರಜೂ ಕಾಟ್ಕರ್ ಅಂಥವರಿಗೆ ಪ್ರಶಸ್ತಿ ಬಂದರೆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸರಜೂ ಕಾಟ್ಕರ್ ಬೆಳಗಾವಿ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ಜ್ಞಾನ ಪೀಠ ಪ್ರಶಸ್ತಿಯಷ್ಟೇ ಮಹತ್ವದ ನೃಪತುಂಗ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಸಂತಸ ನೀಡಿದೆ.
ಹಿರಿಯ ನ್ಯಾಯವಾದಿ ಎಸ್.ಎಂ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಕಾಅತ ಕುಸನೂರ ಪ್ರತಿಷ್ಠಾನದ ಅಧ್ಯಕ್ಷ ರವಿ ಕೊಟಾರಗಸ್ತಿ, ರಂಗತಜ್ಞ ರಾಮಕೃಷ್ಣ ಮರಾಠೆ , ಆರ್.ಬಿ.ಕಟ್ಟಿ , ಎಂ.ಕೆ.ಜೈನಾಪುರ ,ಶಿರೀಶ ಜೋಶಿ ,ಪಿ.ಜಿ.ಕೆಂಪಣ್ಣವರ, ಖುಷಿ ಡವಳಿ ಇತರರಿದ್ದರು.