ಯಾದಗಿರಿ ಸಮೀಪದ ಹೆಡಗಿಮದ್ರಿಯ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಮಂಗಳವಾರ ಆರಂಭವಾದ ಸಪ್ತ ಭಜನೆಯಲ್ಲಿ ಭಾಗವಹಿಸಿದ್ದ ರೈತರು. 
ರಾಜ್ಯ

ಹೆಡಗಿಮದ್ರಿಯಲ್ಲಿ ಸಪ್ತ ಭಜನೆ ಆರಂಭ

ಪ್ರಮುಖ ಮುಖ್ಯಾಂಶಗಳು

  • ವರುಣನಿಗಾಗಿ ರೈತರಿಂದ ವಿಶೇಷ ಪ್ರಾರ್ಥನೆ
  • ನಿರಂತರ ಮೊಳಗುತ್ತಿರುವ ಓಂ ನಮಃ ಶಿವಾಯ ಮಂತ್ರ
 ಯಾದಗಿರಿ : ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಪರಿಣಾಮ ಕಂಗಲಾಗಿರುವ ಜಿ¯್ಲೆಯ ರೈತರ ಒಳಿತಿಗಾಗಿ ಮಳೆರಾಯ ಬೇಗ ಧರೆಗೆ ಇಳಿಯಲಿ ಎಂದು ಭಕ್ತಿ ಹರಕೆಯೊಂದಿಗೆ ಇಲ್ಲಿಗೆ ಸಮೀಪದ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಮಂಗಳವಾರದಿAದ ಏಳು ದಿನಗಳ ಸಪ್ತ ಭಜನೆ ಹಾಗೂ ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ. 
ಮಠಾಽÃಶರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರದಿAದ ರೈತರು ಸಪ್ತಭಜನೆ ಆರಂಭಿಸಿz್ದÁರೆ. ಪ್ರತಿ ಎರಡು ಗಂಟೆಗೊಮ್ಮೆ ಪಾಳಿ ಪ್ರಕಾರ ಏಳು ಜನ ರೈತರು ಸ್ನಾನ ಮುಗಿಸಿ ಮಡಿಯಿಂದಲ್ಲೇ ದೇವಸ್ಥಾನದ ಆವರಣದಲ್ಲಿ ಸಪ್ತಭಜನೆ ಮಾಡುವರು.
ಓಂ ನಮಃ ಶಿವಾಯ ಎಂಬ ಮಂತ್ರದೊAದಿಗೆ ವರುಣ ಬೇಗನೇ ಧರೆಗೆ ಇಳಿದು ಅನ್ನದಾತನನ್ನು ಉಳಿಸಿ,ಬೆಳೆಸು ಎಂಬ ಭಕ್ತಿಯ ಪೂಜೆ ಆರಂಭವಾಗಿದೆ. ಇದು ಬರುವ ಸೋಮವಾರ ಸಮಾರೋಪಗೊಳ್ಳಲಿದೆ ಎಂದು ಸಪ್ತ ಭಜನಾ ಕಾರ್ಯಕ್ರಮದ ವಿವರನ್ನು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್ ತಿಳಿಸಿದರು.
ರೈತರು ಮಳೆ ಇಲ್ಲದ ಕಾರಣ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತ ಸುಖಿ ಇದ್ದರೆ ನಾಡೆಲ್ಲ ಸಮೃದ್ಧಿ ಎಂಬAತೆ ಮಳೆಗಾಗಿ ಇಲ್ಲಿ ಸಪ್ತ ಭಜನೆ ಆರಂಭಿಸಲಾಗಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ಈ ತರಹದ ಸಪ್ತ ಭಜನೆ ಆಯೋಜಿಸಲಾಗಿತ್ತು ಎಂದರು.
ಈ ವೇಳೆ ಮಹಾಂತಯ್ಯ ಸ್ವಾಮಿ ಹಿರೆಮಠ, ಮಲ್ಲರಡ್ಡಿಗೌಡ ಅರಿಕೇರಿ, ರಾಮರೆಡ್ಡಿಗೌಡ ಅಣಿಬಿ, ಭೀಮಣ್ಣಗೌಡ ಕ್ಯಾತನಾಳ, ಶಾಂತಗೌಡ ಪಗಲಾಪುರ, ಭೀಮರೆಡ್ಡಿ ಸಾವು ಬನ್ನೆಟಿ, ಸಿದ್ದರಾಮರಡ್ಡಿ ಅಣಿಬಿ, ವಿಜಯ ರೆಡ್ಡಿ ಅಲಿಪುರ, ಸದಾಶಿವರೆಡ್ಡಿ ಅಣಿಬಿ, ವಿಶ್ವಾರಾಧ್ಯ ವಾರದ, ರಾಮಣ್ಣಗೌಡ ಕಂದಳ್ಳಿ, ಮಲ್ಲಣ್ಣ ವಿಶ್ವಕರ್ಮ, ಸಿದ್ದಣ್ಣ ಪೂಜಾರಿ, ಶೇಖಪ್ಪ ಹೊರುಂಚಿ, ಬಸವರಾಜಗೌಡ ಬೋಮ್ಮಶೆಟಹಳ್ಳಿ, ಬಸವರಾಜ ನಾಯ್ಕಲï, ಶಿವಪ್ಪ ಸಣ್ಣೆಪನೊರ, ಭೀಮರಾಯ ಬಂಗಾರಿ, ಕಾಂತಪ್ಪ ಪುಜÁರಿ, ಜನಾರ್ಧನ ರಾಠೋಡ, ಸುರೇಶ ರಾಠೋಡ, ಮೇಘನಾಥ ಇತರರಿದ್ದರು.

ಅನುಷ್ಠಾನ -Àಲದಿಂದ ಮಳೆಯಾಗಲಿ

ಯಾದಗಿರಿ: ಈ ನಾಡಿನ ಶ್ರೇಷ್ಠ ಪರಂಪರೆಗಳಲ್ಲಿ ಋಷಿ, ಕೃಷಿ ಪರಂಪರೆ ಪ್ರಮುಖವಾಗಿವೆ. ಋಷಿ ಪರಂಪರೆಯನ್ನು ಎತ್ತಿಹಿಡಿದು ಪೋಷಿಸಿಕೊಂಡು ಬಂದ ಕೃಷಿಕರು ಇಂದು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿz್ದÁರೆ. ಪೂಜೆ, ತಪಸ್ಸು ಮತ್ತು ಅನುಷ್ಠಾನದ -Àಲದಿಂದ ಉತ್ತಮ ಮಳೆಯಾಗಿ ರೈತರು ಸುಭಿಕ್ಷವಾಗಿ ಬದುಕುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದು ಮಠದ ಪೀಠಾಽಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು  ಹೇಳಿದರು.
ಕಲಿಯುಗದಲ್ಲಿ ನಾಮಸ್ಮರಣೆಗೆ ವಿಶೇಷ ಶಕ್ತಿಯಿದೆ. ಕಲೊ ನಾಮ ಸಂಕೀರ್ತನA ಎಂಬ ಮಾತಿನಂತೆ ಶಿವನಾಮ ಸ್ಮರಣೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ನಾಡಿನ ವಿವಿಧ ಮಠ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಯುತ್ತಿದ್ದು, ನಮ್ಮ ಮಠದಲ್ಲಿಯೂ ರೈತರು ಒಗ್ಗೂಡಿ ಶಿವನಾಮ ಸ್ಮರಣೆ ಮಾಡುತ್ತಿz್ದÁರೆ ಎಂದರು.
ಮುAಬರುವ ಏಳು ದಿನಗಳೊಳಗೆ ಮಳೆಯಾಗುತ್ತದೆ ಎಂಬ ವಿಶ್ವಾಸವಿದೆ. ಉತ್ತಮ ಮಳೆ ಸುರಿದು ರೈತರಲ್ಲಿ ಹೊಸ ಉತ್ಸಾಹ ಮೂಡಲಿ. ಬರದ ಛಾಯೆ ದೂರವಾಗಿ ನಾಡು ಸುಭಿಕ್ಷವಾಗಲಿ ಎಂಬುದೇ ನಮ್ಮ ಪ್ರಾರ್ಥನೆ ಎಂದು ತಿಳಿಸಿದರು.