ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಕೋಣಂದೂರು ಬೃಹನ್ಮಠದಲ್ಲಿ ನಡೆದ ಸಂಕ್ರಾಂತಿ ಧರ್ಮ ಸಮಾರಂಭ 
ರಾಜ್ಯ

ಅನೇಕತೆಯಲ್ಲಿ ಏಕತೆ ಸಾಧಿಸುವುದೇ ಸಂಕ್ರಾಂತಿ; ಕಾಶೀ ಜಗದ್ಗುರುಗಳು ವಿಶ್ಲೇಷಣೆ

ಪ್ರಮುಖ ಮುಖ್ಯಾಂಶಗಳು

  • ಅನೇಕತೆಯಲ್ಲಿ ಏಕತೆ ಸಾಧಿಸುವುದೇ ಸಂಕ್ರಾಂತಿ
  • ಕಾಶೀ ಜಗದ್ಗುರು ಡಾ.ಚಂದ್ರಶೇಖರ ಭಗವತ್ಪಾದರ ವಿಶ್ಲೇಷಣೆ
  • ಕೋಣಂದೂರು ಬೃಹನ್ಮಠದಲ್ಲಿ ಧನುರ್ಮಾಸದ ಪೂಜೆ, ಸಂಕ್ರಾಂತಿ ಸಮಾರಂಭ

ಕೋಣಂದೂರು: ಭಾರತದಲ್ಲಿಹಲವು ಜಾತಿ, ಮತ,ಭಾಷೆ, ಪ್ರದೇಶ,ವಿವಿಧ ಸಂಸ್ಕೃತಿಗಳಿದ್ದರೂಕೆಲವು ನಿಗದಿತ ಹಬ್ಬ ಹರಿದಿನಗಳಮೂಲಕ ಏಕತೆಯನ್ನು ಸಾಧಿಸುವಪರಿಪಾಠವನ್ನು ನಮ್ಮ ಋಷಿ-ಮುನಿಗಳುಹಾಕಿಕೊಟ್ಟಿದ್ದಾರೆ. ಅನೇಕತೆಯಲ್ಲಿಏಕತೆ ಸಾಧಿಸುವುದೇ ನಿಜವಾದಸಂಕ್ರಾಂತಿ ಎಂದು ಕಾಶೀ ಜಗದ್ಗುರುಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.

ಸಮೀಪದಕೋಣಂದೂರು ಬೃಹನ್ಮಠದಲ್ಲಿಹಮ್ಮಿಕೊಂಡಿದ್ದ ಧನುರ್ಮಾಸದಇಷ್ಟಲಿಂಗ ಮಹಾಪೂಜೆ ಸಮಾರೋಪಮತ್ತು ಸಂಕ್ರಾಂತಿ ಧರ್ಮ ಸಮಾರಂಭದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.

ಸಂಕ್ರಾಂತಿಹಬ್ಬದಂದು ಸಮುದ್ರ ಸ್ನಾನ,ಸಂಗಮ ಸ್ನಾನಗಳನ್ನುಮಾಡಬೇಕೆಂಬ ನಿಯಮವಿದೆ. ಸಂಗಮಸ್ನಾನದ ಸಾಂಕೇತಿಕ ಅರ್ಥ. ದೇಶ,ಧರ್ಮಕ್ಕಾಗಿ ಎಲ್ಲರೂಒಂದಾಗಿ ಹೋಗುವುದು ಎಂದರ್ಥ.ನದಿಗಳು ಭಿನ್ನಪ್ರದೇಶದಲ್ಲಿ ಹುಟ್ಟಿದರೂ ನಿಗದಿತಸ್ಥಳದಲ್ಲಿ ಸೇರಿದ ಮೇಲೆ ಅವುಸಾಗರವನ್ನು ಸೇರುವವರೆಗೆ ಎಂದಿಗೂಮತ್ತೆ ಬೇರೆ ಆಗದಂತೆ ಕೂಡಿಕೊಂಡೇಹರಿಯುತ್ತವೆ. ಇಂತಹಏಕತೆಯನ್ನು ಮೈಗೂಡಿಸಿಕೊಳ್ಳುವುದಕ್ಕಾಗಿಯೇಸಂಗಮ ಸ್ನಾನ ಮಾಡುವ ಪದ್ದತಿರೂಢಿಗೆ ಬಂದಿದೆ. ಇಂದುಕೋಣಂದೂರು ಮಠದಲ್ಲಿ ಕೂಡಾ ಭಕ್ತರಸಂಗಮ ಸ್ನಾನವನ್ನು ಮಾಡಿದ್ದಾರೆ.ಅದು ಹೇಗೆಂದರೆಇಲ್ಲಿರುವ ಹತ್ತಾರು ಶಿವಾಚಾರ್ಯರುಒಂದೊಂದು ನದಿಗಳಿದ್ದಂತೆ ಅವರೆಲ್ಲರೂಕೂಡಿ ಸಮುದ್ರದೋಪಾದಿಯಲ್ಲಿಆಗಮಿಸಿರುವ ಜಗದ್ಗುರುಗಳಸಾನ್ನಧ್ಯವನ್ನು ಸೇರಿದ್ದಾರೆ.ಇಲ್ಲಿ ದೊರೆತ ಜ್ಞಾನಗಂಗೆಯಲ್ಲಿ ಮಿಂದು ನೀವೆಲ್ಲಾಜೀವನದಲ್ಲಿ ದೇಶ, ಧರ್ಮಕ್ಕಾಗಿಒಂದಾಗಿ ಸಾಗುವಂತೆ ಜಗದ್ಗುರುಗಳುಭಕ್ತರಿಗೆ ಕರೆ ನೀಡಿದರು.

ಸಮಾರಂಭಕ್ಕೂಮುನ್ನ ಕಾಶೀ ಜಗದ್ಗುರುಗಳು ನಡೆಸಿದಸಾರ್ವಜನಿಕ ಇಷ್ಟಲಿಂಗ ಮಹಾಪೂಜೆಯಲ್ಲಿಭಕ್ತರು ಪಾಲ್ಗೊಂಡು ಗುರುಗಳಪಾದಪೂಜೆ ನೆರವೇರಿಸಿ ತೀರ್ಥಪ್ರಸಾದ ಸ್ವೀಕರಿಸಿದರು.ಶ್ರೀಮಠದಿಂದಜಗದ್ಗುರುಗಳ ತುಲಾಭಾರ ಮಾಡಲಾಯಿತು.

ಸಮಾರಂಭದಲ್ಲಿಕೋಣಂದೂರು ಬೃಹನ್ಮಠದ ಶ್ರೀಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು, ಕವಲೇದುರ್ಗದ ರಾಜಗುರು ಶ್ರೀ ಮರುಳಸಿದ್ದಶಿವಾಚಾರ್ಯ ಸ್ವಾಮಿಗಳು,ಮಳಲಿಮಠದ ಡಾ.ಗುರುನಾಗಭೂಷಣಶಿವಾಚಾರ್ಯ ಸ್ವಾಮಿಗಳು,ಹೊನ್ನಾಳಿ ಹಿರೇಕಲ್ಮಠದಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳು,ತೊಗರ್ಸಿ,ಕ್ಯಾಸನೂರು,ಬನವಾಸಿ ಮತ್ತಿತರಮಠಗಳ ಶ್ರೀಗಳು, ಸಂಸದಬಿ.ವೈ.ರಾಘವೇಂದ್ರ,ಡಿಸಿಸಿ ಬ್ಯಾಂಕ್ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉದ್ಯಮಿಕೆ.ಆರ್.ಪ್ರಕಾಶ್,ಹಾರೋಹಿತ್ತಲುಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.