ಚಿತ್ರ ೧೩ ಕೆ.ಎಲ್.ಆರ್. ೦೧ : ಕೋಲಾರದ ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂವು ಕ್ವಿಂಟಾಲ್‌ಗಟ್ಟಲೆ ಮಾರುಕಟ್ಟೆಗೆ ಬಂದಿರುವುದು.
ಹೊಸ ವರ್ಷದ ಪ್ರಥಮ ಹಬ್ಬವಾದ ಸಂಕ್ರಾAತಿ ಹಬ್ಬಕ್ಕೆ ಅಗತ್ಯ ವಸ್ತುಗಳ ಬೆಲೆ ಸಾಧಾರಣವಾಗಿದ್ದು, ಬಡವರಿಗು ಎಟಕುವ ದರದಲ್ಲಿ ಕೈಗೆ ಸಿಗುವಂತಾಗಿದ್ದು, ಮಂಗಳವಾರ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಬೆಲೆ ಏರಿಕೆ ಸಾಧಾರಣವಾಗಿದ್ದು, ಗ್ರಾಹಕರಿಗೆ ಸ್ವಲ್ಪ ತುಟ್ಟಿ ಎನಿಸಿದೆ. ರೈತರಿಗೆ ನಿರಾಸೆಯೂ ಆಗಿದೆ.
ಕಬ್ಬು, ಕಡಲೇಕಾಯಿ, ಎಳ್ಳುಬೆಲ್ಲ ಸ್ವಲ್ಪ ದುಬಾರಿ ಎನಿಸಿದರು ಅವರೇಕಾಯಿ, ಚೆಂಡುಹೂವು, ಸೇವಂತಿಗೆ ಬೆಲೆ ಸಾಧಾರಣವಾಗಿದೆ. ಬಾಳೆಹಣ್ಣು, ಮೂಸಂಬಿ, ಆಪಲ್ ಇವುಗಳ ಬೆಲೆ ಮಾಮೂಲಿಯಾಗಿ ಮಾರುಕಟ್ಟೆಯಲ್ಲಿ ಕಂಡುಬAದಿತು.
ಗುರುವಾರ ಸಂಕ್ರಾAತಿ ಹಬ್ಬ ಇರುವ ಕಾರಣ ೨ ದಿನ ಮುಂಚಿತವಾಗಿ ಮಾರುಕಟ್ಟೆಗೆ ಅಗತ್ಯ ವಸ್ತುಗಳು ಲಗ್ಗೆ ಇಟ್ಟಿದ್ದವು. ಜೋಡಿ ಕಬ್ಬು ೧೫೦ ರಿಂದ ೨೦೦ ರೂ.ಗಳ ತನಕ ಮಾರಾಟವಾಗುತ್ತಿತ್ತು. ಕಡಲೇಕಾಯಿ ಕೆ.ಜಿ. ೬೦ ರಿಂದ ೧೫೦ ರೂ.ಗಳ ತನಕ ಮಾರಾಟವಾಗುತ್ತಿತ್ತು. ಚೆಂಡು ಹೂವು ೧೦ ರೂ.ಗಳಿಗೆ ರೈತರಿಂದ ಖರೀದಿಸುತ್ತಿದ್ದರು. ಅವರೇಕಾಯಿ ಮಾರುಕಟ್ಟೆಯಲ್ಲಿ ೧೦೦ ರೂ.ಗಳಿಗೆ ೨.೫ ಕೆ.ಜಿಯಿಂದ ೩ ಕೆ.ಜಿ ತನಕ ನೀಡುತ್ತಿದ್ದರು.
ಸೇವಂತಿಗೆ ೪೦ ರೂ.ಗಳಿಂದ ೯೦ ರೂ.ಗಳ ತನಕ ರೈತರಿಂದ ಖರೀದಿಸಿ ವ್ಯಾಪಾರಸ್ಥರು ೧೦೦ ರೂ.ಗಳಿಂದ ೧೫೦ ರೂ.ಗಳ ತನಕ ಮಾರಾಟ ಮಾಡುತ್ತಿದ್ದರು. ಚೆಂಡುಹೂವು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗಟ್ಟಲೆ ಮೂಟೆಗಳು ಕೊಳೆಯುತ್ತಿದ್ದವು. ಗುಣಮಟ್ಟದ ಚೆಂಡು ಹೂವು ವ್ಯಾಪಾರಸ್ಥರು ೩೦ ರಿಂದ ೪೦ ರೂ.ಗಳ ವರೆಗೆ ಮಾರಾಟ ಮಾಡುತ್ತಿದ್ದರು. ಎಳ್ಳುಬೆಲ್ಲ ಮಿಶ್ರಣ ಕೆ.ಜಿ.ಗೆ ೨೦೦ ರೂ.ಗಳಂತೆ ಮಾರಾಟ ಮಾಡುತ್ತಿದ್ದರು.
ಒಟ್ಟಾರೆಯಾಗಿ ಸಂಕ್ರಾAತಿ ಹಬ್ಬಕ್ಕೆ ಬೆಲೆ ಏರಿಕೆ ಸಾಧಾರಣವಾಗಿದ್ದು, ಮಾಧ್ಯಮವರ್ಗ ಮತ್ತು ಬಡಜನತೆಗು ಎಟುಕುವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಕಂಡುಬAದಿತು. ಅವರೇಕಾಯಿಯನ್ನು ಈ ಹಬ್ಬಕ್ಕೆ ಹೆಚ್ಚಾಗಿ ಬಳಸುತ್ತಿದ್ದರು. ಅವರೇಕಾಯಿ ೩೫ ರಿಂದ ೪೦ ರೂ.ಗಳ ತನಕ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ರೈತರ ಬಳಿ ೩೦ ರೂ.ಗಳಿಗೆ ಖರೀದಿಸುತ್ತಿದ್ದು, ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಎನಿಸಿದರು ರೈತರ ಆಸೆಗೆ ನಿರಾಸೆಯಾಗಿತ್ತು.