ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಆರೋಪಿ ಹಣಮಂತ ಭಜಂತ್ರಿ 
ರಾಜ್ಯ

ಎಸ್‌ಪಿ ಹೆಸರಲ್ಲೇ ಹಣ ಎತ್ತಿದ ಭೂಪ, ಲಕ್ಷ್ಮಣ ನಿಂಬರಗಿ ಬಿಚ್ಚಿಟ್ಟ ಶಾಕಿಂಗ್ ನ್ಯೂಸ್

ಪ್ರಮುಖ ಮುಖ್ಯಾಂಶಗಳು

  • ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಠಿ
  • ನೌಕರಿಯ ಆಮಿಷವೊಡ್ಡಿ ವಂಚನೆ
  • ರೂ. 5,04,600 ವಂಚನೆಗೈದ ಭೂಪ
ವಿಜಯಪುರ: ಇಲ್ಲೊಬ್ಬ ಭೂಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿಯೇ ನೌಕರಿ ಆಮಿಷವೊಡ್ಡಿ ವಂಚನೆಗೈದಿದ್ದಾನೆ !
ಹೌದು, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಠಿಸಿ ಸಾರ್ವಜನಿಕರಿಗೆ ವಂಚನೆಗೈದಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 2025ರಲ್ಲಿಯೇ ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಇದೀಗ ಪೊಲೀಸರು ವಂಚಕನನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ.
ಅಂದಹಾಗೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂಬಾತನೇ ಆ ವಂಚಕನಾಗಿದ್ದು, ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಸುರೇಶ ಅಥಣಿ ವಂಚನೆಗೊಳಗಾದ ವ್ಯಕ್ತಿ. ಪಿಡಬ್ಲುಡಿ ಇಲಾಖೆಯಲ್ಲಿ ಎಸ್‌ಡಿಸಿ ನೌಕರಿ ಕೊಡಿಸುವದಾಗಿ 5,04,600 ರೂ.ವಂಚನೆಗೈದಿದ್ದಾನೆ. ಆರೋಪಿತ ಹಣಮಂತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇನ್ನೂ ಇಂಥ ಎಷ್ಟು ಪ್ರಕರಣಗಳಲ್ಲಿ ಈತ ಭಾಗಿಯಾಗಿರಬಹುದೆಂದು ವಿಚಾರಣೆ ನಡೆಸುತ್ತಿರುವುದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.