ಹಿಂದೂಸ್ತಾನಿ ಗಾಯಕ ಪಂಡಿತ್ ವಾಗೀಶ್ ಭಟ್ 
ರಾಜ್ಯ

ಸಂಗೀತೋತ್ಸವ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ‘16ನೇ ಸಂಗೀತೋತ್ಸವ ಹಾಗೂ ಪುಟ್ಟಶ್ರೀ ಸಮ್ಮಾನ್ ಪ್ರಶಸ್ತಿ ಪ್ರದಾನ’
ಬೆಂಗಳೂರು: ನಗರದ ಶ್ರೀ ಗುರುಗಾನ ಲಹರಿ ಸಂಗೀತ ಅಕಾಡೆಮಿಯ ‘16ನೇ ಸಂಗೀತೋತ್ಸವ ಹಾಗೂ ಪುಟ್ಟಶ್ರೀ ಸಮ್ಮಾನ್ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಶನಿವಾರ (ಫೆ. 7) ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪುಟ್ಟಶ್ರೀ ಪ್ರಶಸ್ತಿಗೆ ಹಿಂದೂಸ್ತಾನಿ ಗಾಯಕ ಪಂಡಿತ್ ವಾಗೀಶ್ ಭಟ್ ಮತ್ತು ಸುಗಮ ಸಂಗೀತ ಆಯಕ ವಿದ್ವಾನ್ ಪ್ರಭುರಾವ್ ಸೊನ್ನ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ನಗರದು, ಸ್ಮರಣಿಕೆ ಒಳಗೊಂಡಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ತಬಲಾ ವಾದಕ ಪಂ. ಸತೀಶ್ ಹಂಪಿಹೊಳಿ ಉದ್ಘಾಟಿಸಲಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಥಕ್ ನೃತ್ಯ ಕಲಾವಿದೆ ವಿದುಷಿ ಪೂರ್ಣಾ ಆಚಾರ್ಯ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ್ ದೇವೇಂದ್ರಕುಮಾರ್ ಪತ್ತಾರ್ ಅವರನ್ನು ಗೌರವಿಸಲಾಗುವುದು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರು ಶಾಸೀಯ ಸಂಗೀತ ಪ್ರಸ್ತುತಿ ಪಡಿಸಲಿದ್ದಾರೆ. ಪಂ. ಶಿವಾನಂದ್ ಹೇರೂರ್, ವಿದ್ವಾನ್ ಗೌರವ್ ಅಗ್ನಿಹೋತ್ರಿ, ವಿದುಷಿ ಅಮೃತ ತ್ರಿಪಾಠಿ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಗಾನಪ್ರಕಾರಗಳ ಪ್ರಸ್ತುತಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.