ಔರಾದ್ನಲ್ಲಿ ಗುರುವಾರ ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಶಾಸಕ ಪ್ರಭು ಚವ್ಹಾಣ್ ಪುಷ್ಪನಮನ ಅರ್ಪಿಸಿದರು. ಸಮಾಜದ ಪ್ರಮುಖರಾದ ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ಪ್ರವಿಣ ಕಾರಬಾರಿ, ವೆಂಕಟರಾವ ನೆಳಗೆ, ಕಮಲಾಕರ ಗುರೂಜಿ, ಕೇರಬಾ ಪವಾರ್ ಇತರರಿದ್ದರು.
ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿಯವರು ತಂದೆಯಂತೆ ಶೌರ್ಯ, ಪರಾಕ್ರಮ, ರಾಷ್ಟ್ರಭಕ್ತಿ ಹಾಗೂ ಧರ್ಮರಕ್ಷಣೆಗೆ ಹೆಸರುವಾಗಿದ್ದರು. ಬಾಲ್ಯದಲ್ಲಿಯೇ ಯುದ್ಧ ಕಲೆ, ಆಡಳಿತ ಹಾಗೂ ರಾಜತಾಂತ್ರಿಕತೆಯ ಕುರಿತು ಪ್ರಾವಿಣ್ಯತೆ ಹೊಂದಿದ್ದರು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ನಿಮಿತ್ತ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಭಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ಹಾದಿಯಲ್ಲಿ ನಡೆದು, ಮರಾಠಾ ಸಾಮ್ರಾಜ್ಯದ ಸ್ವಾಭಿಮಾನವನ್ನು ಎತ್ತಿಹಿಡಿದರು ಎಂದರು.
ಅಂದು ಪ್ರಬಲವಾಗಿದ್ದ ಮೊಲರ ವಿರುದ್ಧ ನಿರಂತರ ಹೋರಾಟ ನಡೆಸಿ ಸ್ವರಾಜ್ಯ ಹಾಗೂ ಧರ್ಮರಕ್ಷಣೆಗೆ ತಮ್ಮ ಜೀವನವನ್ನೇ ಅರ್ಪಿಸಿದರು. ಸಂಕಷ್ಟ, ಹಿಂಸೆ ಹಾಗೂ ಒತ್ತಡಗಳ ನಡುವೆಯೂ ಧರ್ಮ, ನಾಡು ಮತ್ತು ಸ್ವಾಭಿಮಾನವನ್ನು ಬಿಟ್ಟು ಕೊಡುವುದಿಲ್ಲ. ಅವರ ತ್ಯಾಗ, ಸಾಹಸ ಮತ್ತು ಅಪ್ರತಿಮ ದೇಶಭಕ್ತಿ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗಿದೆ. ದೇಶ ಕಂಡ ಅಪರೂಪದ ಮಹಾರಾಜರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ ಮಾತನಾಡಿದರು. ಮುಖಂಡರಾದ ಧೊಂಡಿಬಾ ನರೋಟೆ, ಪ್ರವಿಣ ಕಾರಬಾರಿ, ವೆಂಕಟರಾವ ನೆಳಗೆ, ಕಮಲಾಕರ ಗುರೂಜಿ, ಕೇರಬಾ ಪವಾರ್, ಚೇತನ ಕಪ್ಪಿಕೇರೆ, ಸಂಜೀವಕುಮಾರ ಜಾಧವ್, ಮಾಧವ ಮಾಳಕಾರಿ, ಕೇಶವ ಪವಾರ್, ರಾಮರಾವ ಪಾಟೀಲ, ರಾಮರಾವ ಜಾಧವ್, ಶಿವರಾಜ ಜುಲಾಂಡೆ, ಸೂರ್ಯಕಾಂತ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ವಕೀಲ ಶಿವರಾಜ ಅಲ್ಮಾಜೆ, ರಾಜೇಂದ್ರ ಜಾಧವ್, ಭರತ ಕದಂ, ಪ್ರಕಾಶ ರ್ಬದಾಪುರೆ, ರಂಜಿತ ಶಿಂಧೆ ಸೇರಿ ಸಮಾಜದ ಪ್ರಮುಖರು ಇದ್ದರು.
ಪಟ್ಟಣದಲ್ಲಿ ಮರಾಠಾ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ್ ಚಾಲನೆ ನೀಡಿ, ಸಮಾಜ ಬಾಂಧವರು ಸಾಂಸತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಕಾಮಗಾರಿಯನ್ನು ಸುಂದರ, ಸುಸಜ್ಜಿತವಾಗಿ ಮತ್ತು ಗುಣಮಟ್ಟದಿಂದಅಂದಾಜು ಪಟ್ಟಿಯಲ್ಲಿರುವಂತೆ ಎಲ್ಲ ಕೆಲಸಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಯಾವುದೇ ರೀತಿಯ ರ್ನಿಲಕ್ಷ$್ಯ ಅಥವಾ ಕಳಪೆ ಕಂಡುಬಂದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
"
ದೇಶದ ಸಂರಕ್ಷಣೆಗೆ ಹೋರಾಡಿದ ಛತ್ರಪತಿ ಸಂಭಾಜಿ ಮಹಾರಾಜ ಅವರ ದೇಶಪ್ರೇಮ, ಜೀವನದ ತತ್ವಾದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಂಡಾಗ ಸುಭದ್ರವಾದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ.
— > ಪ್ರಭು ಚವ್ಹಾಣ್ ಶಾಸಕ