Sale of Varamahalakshmi festival items on the street halted.
ವರಮಹಾಲ್ಮ ಹಬ್ಬದ ಪ್ರಯುಕ್ತ ನಗರದ ಬೆಂಗಳೂರು ಜೋಡಿ ರಸ್ತೆ ಸೇರಿ ವಿವಿಧ ರಸ್ತೆಯಲ್ಲಿ ವಸ್ತು ಮಾರಾಟಕ್ಕೆ ಬ್ರೇಕ್ ಹಾಕಿರುವ ನಗರಸಭೆ ಆ.20, 21 ರಂದು ನಗರದ ಪಾಲಿಟೆಕ್ನಿಕ್ ಹಿಂಭಾಗದಲ್ಲಿನ ಆಟದ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದು ವ್ಯಾಪಾರಸ್ಥರು ಅಲ್ಲಿ ಮಾರಾಟ ಮಾಡಿಕೊಳ್ಳುವಂತೆ ನಗರ ಪೊಲೀಸ್ ಇನ್ಸ್ಪೆಕ್ಟರ್ ವಿಜಿಕುಮಾರ್ ಹಾಗೂ ಪೌರಾಯುಕ್ತ ಜಿ.ಎನ್.ಚಲಪತಿ ಮನವಿ ಮಾಡಿದ್ದಾರೆ.
ನಗರ ಠಾಣೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಭೆ ಕರೆದು ಮಾತನಾಡಿ, ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಆಗುವ ತೊಂದರೆ ಬಗ್ಗೆ ವಿವರಿಸಿದಲ್ಲದೆ ನಗರದ ಹಾಗೂ ತಾಲೂಕಿನ ಜನರು ಪಾಲಿಟೆಕ್ನಿಕ್ ಆಟದ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದರು.
ವರಮಹಾಲ್ಮ ಹಬ್ಬದ ಪ್ರಯುಕ್ತ ಬೆಂಗಳೂರು ಜೋಡಿ ರಸ್ತೆ, ಎಂ.ಜಿ.ರಸ್ತೆ ಮತ್ತಿತರರ ಜನನಿಬಿಡ ರಸ್ತೆಗಳಲ್ಲಿ ತಳ್ಳುವ ಬಂಡಿ ಹಾಗೂ ಪುಟ್ಪಾತ್ನಲ್ಲಿ ಅಂಗಡಿ ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುವುದರಿಂದ ನಗರದಲ್ಲಿ ಜನದಟ್ಟಣೆಯಿಂದ ಬಹುತೇಕ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಸಂಪೂರ್ಣ ಸಂಚಾರ ಅಸ್ಥವ್ಯಸ್ಥವಾಗುತ್ತಿತ್ತು.
ಹಬ್ಬದ ದಿನದಂದು ಒಂದೇ ಕಡೆ ಬೀದಿ ಬದಿ ವ್ಯಾಪಾರಕ್ಕೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ಶಾಸಕರು ಸೂಚನೆ ನೀಡಿದರು.