ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಸೇಡಂ ತಹಸಿಲ್ ಕಚೇರಿ ಆವರಣದಲ್ಲಿನ ನಂದಿನಿ ಮಿಲ್ಕ್ ಪಾರ್ಲರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದರು. ಡಾ.ಸಂಜು ಪಾಟೀಲ್, ಮಲ್ಲಿಕಾರ್ಜುನ, ಪ್ರೀತಿ, ಮಹಾಂತೇಶ, ಮರೆಪ್ಪ ಇದ್ದರು.
- ಆರೋಗ್ಯ ಅಧಿಕಾರಿಗಳಿಂದ ದಿಢೀರ್ ದಾಳಿ
- ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ
ಸೇಡಂ: ತಹಸಿಲ್ ಕಚೇರಿ ಆವರಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅನಧಿಕೃತವಾಗಿ ಗುಟ್ಖಾ, ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ ಸಾಕಷ್ಟು ಪ್ರಮಾಣದ ಗುಟ್ಖಾ, ಸಿಗರೇಟ್ ವಶಕ್ಕೆ ಪಡೆದಿದೆ.
ಸರ್ಕಾರವು ತನ್ನ ಸ್ವಾಯತ್ತ ಸಂಸ್ಥೆಯಾದ ನಂದಿನಿ ಉತ್ಪನ್ನಗಳ ಮಾರಾಟದ ಉದ್ದೇಶಕ್ಕಾಗಿ ಸರ್ಕಾರಿ ಕಚೇರಿ ಆವರಣದಲ್ಲಿ ಅಂಗಡಿ ಸ್ಥಾಪಿಸಲು ಅನುಮತಿ ನೀಡಿದೆ. ಆದರೆ ಹೆಸರಿಗಷ್ಟೆ ನಂದಿನಿ ಪಾರ್ಲರ್ ಆಗಿದ್ದು, ಗುಟ್ಖಾ, ಸಿಗರೇಟ್, ಉಪಾಹಾರ ಮಾರಾಟ ಜೋರಾಗಿ ನಡೆಸಲಾಗುತ್ತಿತ್ತು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದ್ದು, ಪ್ರಥಮವಾಗಿ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮಾಡಬಾರದು. ಅದರಲ್ಲಿಯು ನಂದಿನಿ ಪಾರ್ಲರ್ನಲ್ಲಿ ತಂಬಾಕು ಉತ್ಪನ್ನ ಮಾರಾಟ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜು ಪಾಟೀಲ್, ನಗರಸಭೆ ಹಿರಿಯ ನೈರ್ಮಲ್ಯ ನಿರೀಕ್ಷಕ ಮಲ್ಲಿಕಾರ್ಜುನ ಪಾಟೀಲ್, ೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರೀತಿ, ಎಸ್ಟಿಎಸ್ನ ಮಹಾಂತೇಶ, ಮರೆಪ್ಪ ಇತರರಿದ್ದರು.