ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಎಸ್.ಜಾನಕಿ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರ ಸಂಜೀವನಾಯಕ್, ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡಪರ ಸಂಘಟನೆಗಳ ಮುಖಂಡರಾದ ಡಿ.ವೆಂಕಟೇಶ್, ನಾಗರಾಜ್, ಬಿ.ಜಿ.ಅಮರನಾಥ್ ಇತರರಿದ್ದರು.
ದೊಡ್ಡಬಳ್ಳಾಪುರ : ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ ಎಸ್.ಜಾನಕಿ ಅವರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಮೂಲಕ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ ಎಂದು ಕನ್ನಡಪರ ಹೋರಾಟಗಾರರ ಮುಖಂಡ ಸಂಜೀವನಾಯಕ್ ಬಣ್ಣಿಸಿದರು.
ಕನ್ನಡ ಜಾಗೃತ ಭವನದಲ್ಲಿತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾಗೃತ ಪರಿಷತ್ ಮತ್ತು ಸುಸ್ವರ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್.ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಕಿ ಅವರು ಹಾಡಿರುವ ಎಲ್ಲ ಹಾಡುಗಳು ಕೇಳುಗರ ಮನಗೆದ್ದಿವೆ. ಪ್ರೀತಿ, ವಿರಹ, ಸಂತೋಷ ಸೇರಿದಂತೆ ಎಲ್ಲ ಭಾವನೆಗಳನ್ನೂ ತಮ್ಮ ಧ್ವನಿಯ ಮೂಲಕವೇ ಜೀವಂತಗೊಳಿಸುತ್ತಿದ್ದರು. ಚಿಕ್ಕ ಮಕ್ಕಳ ಧ್ವನಿಯನ್ನು ಅನುಕರಿಸಿ ಹಾಡುತ್ತಿದ್ದ ರೀತಿ ಅವರ ಧ್ವನಿಯ ವೈಶಿಷ್ಟ$್ಯ. ಹಲವು ಚಿತ್ರಗಳಲ್ಲಿ ಅವರು ಹೇಳಿರುವ ಮಕ್ಕಳ ಹಾಡುಗಳು ಜನಪ್ರಿಯವಾಗಿವೆ ಎಂದರು.
ಗಮನ ಸೆಳೆದ ಗಾನ ನಮನ : ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕಲಾವಿದರು ನಡೆಸಿಕೊಟ್ಟ ಎಸ್.ಜಾನಕಿ ಅವರ ಚಲನಚಿತ್ರಗಳ ಗಾಯನ ಪ್ರೇಕ್ಷಕರ ಗಮನಸೆಳೆಯಿತು. ಕಲಾವಿದರಾದ ನಾಗರತ್ನ ಮಹಾಬಲೇಶ್ವರ್, ರಾಮಕೃಷ್ಣ, ರವಿರಾಜ್, ಚಂದ್ರಶೇಖರ್, ಸಿ.ನಟರಾಜ್, ಮಲ್ಲೇಶ್, ನಾಗರತ್ಣಾ, ಪಷ್ಪಾ, ಜಯಮ್ಮ ಮತ್ತು ಸುಸ್ವರ ಬಳಗದ ಕಲಾವಿದರು ಹಾಡಿದರು.