ಆರ್​ವಿಸಿಎ ಕಾಲೇಜಿನ ವಿದ್ಯಾರ್ಥಿ  
ರಾಜ್ಯ

ಎಥೋಸ್ ಸೇಂಟ್ ಗೋಬೈನ್ ಟ್ರಾನ್ಸ್​ಫರೆಂಟ್​ ಸ್ಪರ್ಧೆಯಲ್ಲಿ RVCA 8ನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಬೆನಿಟಾಗೆ ಪ್ರಥಮ ಬಹುಮಾನ!

ಬೆಂಗಳೂರು: ಆರ್​ವಿಸಿಎ ಕಾಲೇಜಿನ 8ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿ ಬೆನಿಟಾ ಆಲಿಸ್ ಜೇಕಬ್ ಅವರಿಗೆ ಎಥೋಸ್ ಸೇಂಟ್ ಗೋಬೈನ್ ಟ್ರಾನ್ಸ್​ಫರೆಂಟ್​ ಸ್ಪರ್ಧೆಯಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ಪ್ರಥಮ ಬಹುಮಾನ ಒಲಿದಿದೆ.
ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ರಾಷ್ಟ್ರೀಯ ವಿಜೇತೆಯಾಗಿ ಹೊರಹೊಮ್ಮಿರುವ ಬೆನಿಟಾ ಅವರಿಗೆ 1,50,000 ರೂ. ನಗದು ಬಹುಮಾನ ನೀಡಲಾಗಿದೆ. ಇನ್ನು ಸೆಕೆಂಡ್​ ನ್ಯಾಷನಲ್​ ರನ್ನರ್​ ಅಪ್​ ಆಗಿ ಅಂಜಲಿ ವಿ. ಆಯ್ಕೆಯಾಗಿದ್ದು, ಅವರಿಗೆ 50,000 ರೂ. ನಗದು ಬಹುಮಾನ ದೊರೆತಿದೆ.
ದೇಶವ್ಯಾಪಿ ಹಲವು ಸಂಸ್ಥೆಗಳಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಆರ್​ವಿಸಿಎ ಕಾಲೇಜಿನ ನಾಲ್ವರು ಟಾಪ್ 6ಗೆ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ, ಚೆನ್ನೈನಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಈ ಫಲಿತಾಂಶ ಘೋಷಣೆಯಾಗಿದೆ.