ಆನೇಕಲ್ ಎಎಸ್ಬಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಯುವಜನೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಟ ಧನ್ವಿರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಎಚ್.ಆರ್.ದೀಪಿಕಾ ರೆಡ್ಡಿ, ಜಿಕೆವಿಕೆ ನಿರ್ದೇಶಕ ಉಲ್ಲಾಸ್ ಶಿವಣ್ಣ, ಕಾಂಗ್ರೆಸ್ ಎಸ್ಸಿ ಘಟಕದ ಬ್ಲಾಕ್ ಅಧ್ಯಕ್ಷ ಮದ್ದೂರಪ್ಪ ಇದ್ದರು.
ಆನೇಕಲ್ : ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದಿಲ್ಲ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಎಎಸ್ಬಿ ಆಟದ ಮೈದಾನದಲ್ಲಿ ಯುವ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ಯುವ ಜನೋತ್ಸವದಲ್ಲಿ ಮಾತನಾಡಿದರು. ಕೆಪಿಸಿಸಿ ಯುವ ಘಟಕದ ಮುಖಂಡ ಮುಹಮ್ಮದ್ ನಲಪಾಡ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ನಿಂದ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಪ್ರೋತ್ಸಾಹಿಸುವುದು ಮಾದರಿ ಎನಿಸಿದೆ ಎಂದರು.
ಯುವ ಕಾಂಗ್ರೆಸ್ ಮುಖಂಡ ರಾಚಮಾನಹಳ್ಳಿ ಮನೋಹರ್ ಮಾತನಾಡಿ, ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಮ್ಮಿಕೊಂಡಿದ್ದು, ಇದರಲ್ಲಿ ರಾಜ್ಯಾದ್ಯಂತ ಆನೇಕ ತಂಡಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಲಾಗಿದೆ. ಇನ್ನು ಸ್ಪರ್ಧೆಯಲ್ಲಿ ಮಹೀ ಡ್ಯಾನ್ಸ್ ತಂಡ ಪ್ರಥಮ, ಡಿಜೆ ಕಿಂಗ್ಸ್ ದ್ವೀತಿಯ ಹಾಗೂ ಸಿಂಧೂರ ತಂಡ ತೃತೀಯ ಬಹುಮಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ಸರ್ಜಾಪುರ ಶಂಭಯ್ಯ, ಶ್ರೀನಿವಾಸ್, ತಟ್ಟನಹಳ್ಳಿ ಭೈರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಕರ್ಪೂರು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಪಿ.ರಮೇಶ್, ಮಾಜಿ ಅಧ್ಯಕ್ಷ ಬೆಸ್ತಮಾನಹಳ್ಳಿ ಯಲ್ಲಪ್ಪ, ಹೆನ್ನಾಗರ ಕಿರಣ್, ಮಂಚನಹಳ್ಳಿ ಸುಬ್ರಹ್ಮಣಿ, ಅಶೋಕ್ ಸಾಮ್ರಾಟ್, ಅನಿಲ್, ಅಭಿ ರೆಡ್ಡಿ, ಜೈ ಭೀಮ್ ಸುರೇಶ್, ಬಿ.ಎಂ.ರಾಮಚಂದ್ರ, ಮುನಿರಾಜು ಇತರರು ಇದ್ದರು.