ದೊಡ್ಡಬಳ್ಳಾಪುರ ಕನಸವಾಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಹನುಮಂತರಾಯಪ್ಪ, ಉಪಾಧ್ಯಕ್ಷ ಮಾರೇಗೌಡ, ಕಾರ್ಯದರ್ಶಿ ಎಚ್​.ವಿ.ಆನಂದ್​, ಖಜಾಂಚಿ ಆರ್​.ಮಹೇಶ್​, ಸಂಘಟನಾ ಕಾರ್ಯದರ್ಶಿ ರವಿಚಂದ್ರ ಇತರರು ಇದ್ದರು. 
ರಾಜ್ಯ

ನಗರಕ್ಕಿಂತ ಗ್ರಾಮೀಣ ಬದುಕೇ ಚೆಂದ / DODABALLAPUR

ದೊಡ್ಡಬಳ್ಳಾಪುರ : ಮಕ್ಕಳ ಬಗ್ಗೆ ಪಾಲಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ರಂಗಭೂಮಿ ಕಲಾವಿದ, ಚಲನಚಿತ್ರ ಹಾಸ್ಯ ನಟರಾದ ಎಂ.ಎನ್​.ಸುರೇಶ್​ ಹೇಳಿದರು.
ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಹೊಂಗಿರಣ ಸಮಾನ ಮನಸ್ಕರ ಸಂಘದ 18ನೇ ವಾರ್ಷಿಕೋತ್ಸವ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯ ಹೊಂದಬೇಕು ಎಂದು ತಿಳಿಸಿದರು.
ಹೊಂಗಿರಣ ಸಮಾನ ಮನಸ್ಕರ ಸಂಘದ ಅಧ್ಯಕ್ಷ ಪಾಂಡುರಂಗ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉಚಿತ ಶಿಕ್ಷಣ ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಕ್ಷೀರಭಾಗ್ಯ ಯೋಜನೆ, ಪೌಷ್ಟಿಕ ಆಹಾರ ವಿತರಣೆ ಸೇರಿ ಹಲವು ಯೋಜನೆ ಅನುಷ್ಠಾನಗೊಳಿಸಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ ಇದೆ. ಆದರೂ, ಪಾಲಕರು ಆಂಗ್ಲಭಾಷೆ ಮತ್ತು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದ ಅಧಿಕ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂದರು.
ವಾರ್ಷಿಕೋತ್ಸವದಲ್ಲಿ ಶಿಕ್ಷಣ ವಿಭಾಗದ ಮಾಜಿ ಡಿಡಿಪಿಐ ಪಿ.ಬೈಲಂಜಿನಪ್ಪ, ಕಲಾ ವಿಭಾಗದ ಕೆ.ಎಸ್​.ಮುನಿರಾಜು, ಕೃಷಿ ವಿಭಾಗದ ಟಿ.ಸಿ.ಸಿದ್ದರಾಜು, ದೇಶ ರಕ್ಷಣೆ ವಿಭಾಗದ ಎಂ.ತಿಮ್ಮೇಗೌಡ, ಸಮಾಜಸೇವೆ ವಿಭಾಗದ ಹನುಮೇಗೌಡ, ಯುವ ಪ್ರತಿಭೆ ವಿಭಾಗದ ಎನ್​.ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು.
ಬೈರಮಂಗಲ ರಾಮೇಗೌಡ, ಶನಿಮಹಾತ್ಮ ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ರಾಜಕುಮಾರ್​, ಪ್ರಾಂಶುಪಾಲ ಗದಿಗೆಪ್ಪ, ಕಾನೂನು ಸಲಹೆಗಾರ ಸಿ.ಗೋವಿಂದರಾಜು, ಸಂಘದ ನಿರ್ದೇಶಕರಾದ ಟಿ.ಸಿ.ವೆಂಕಟಾಚಲಪತಿ, ಎಂ.ಆರ್​.ಮುನಿರಾಜು, ಕಾಂತರಾಜ್​, ಎಸ್​.ಎನ್​.ದೇವರಾಜು, ಬೀರೇಶ್​, ಎನ್​.ಶ್ರೀನಿವಾಸ, ಗಂಗಬೈಲಪ್ಪ, ಸಂಘದ ಸದಸ್ಯರು ಇದ್ದರು.