ಸಂಘದ ಯಾವುದೇ ಧರ್ಮದ ವಿರೋಧಿಯಲ್ಲ 
ರಾಜ್ಯ

ಆರ್ ಎಸ್ ಎಸ್ ಯಾವುದೇ ಧರ್ಮದ ವಿರೋಧಿಯಲ್ಲ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಆರ್ ಎಸ್ ಎಸ್ ಯಾವುದೇ ಧರ್ಮದ ವಿರೋಧಿಯಲ್ಲ
  • ಕ್ಯಾಪ್ಟನ್ ವಿಲಾಸ ಜಂಗಲಿ ಅಭಿಪ್ರಾಯ
  • ಚಿಕ್ಕೋಡಿಯಲ್ಲಿ ಆರ್ ಎಸ್ ಎಸ್ ಸಮಾವೇಶ
ಆರ್ ಎಸ್ ಎಸ್ ಯಾವುದೇ ಧರ್ಮದ ವಿರೋಧಿಯಲ್ಲ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ.ಕೋಮುವಾದಿ ಎಂದು ಬಿಂಬಿಸುತ್ತಾರೆ.ಆದರೆ ಸಂಘ ಯಾವುದೇ ಧರ್ಮದ ವಿರೋಧಿಯಲ್ಲ, ದೇಶ ವಿರೋಧಿ ಚಟುವಟಿಕೆ ವಿರೋಧಿಸುವ ಸಂಘಟನೆಯಾಗಿದೆ ಎಂದು ಕ್ಯಾಪ್ಟನ್ ವಿಲಾಸ ಜಂಗಲಿ ಅಭಿಪ್ರಾಯಪಟ್ಟರು.
ಪಟ್ಟಣದ ಕಿವಡ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಮಾವೇಶದಲ್ಲಿ ಅವರು ನಡೆಸಿದರು.
ದೇಶದ ಒಂದೇ ದೇಶ ಒಂದೇ ಕಾನೂನು, ಹಾಗೂ ಜನಸಂಖ್ಯೆ ನಿಯಂತ್ರಣಕ್ಕಾಗಿ ಎಲ್ಲ ಧರ್ಮಕ್ಕೂ ಒಂದೇ ಕಾನೂನು ಜಾರಿಯಾಗಬೇಕು. ಸ್ವಾತಂತ್ರದ ಪೂರ್ವ ಮತ್ತು ನಂತರದಲ್ಲಿ ರಾಷ್ಟದಲ್ಲಿ ದೇಶಾಭಿಮಾನ ಹೆಚ್ಚಿಸುವ ಕಾರ್ಯದ ಮೂಲಕ ದೊಡ್ಡದಾಗಿ ಚಿರಪರಿಚಿತವಾಗಿದೆ ಶಕ್ತಿಯಾಗಿ ನಿಂತಿದೆ.
ಸಂಘದ ವಕ್ತಾರಂಗೇಶ ಬೆಂಡೆ ಮಾತನಾಡಿ ಸಂಘದ ಸ್ಥಾಪಕ ಡಾ.ಕೇಶವ ಹೆಡೆಗೆವಾರ ಮಧ್ಯಾಹ್ನ ಅಪ್ಪಟ ದೇಶ ಭಕ್ತ, ಬಾಲ್ಯದಲ್ಲಿಯೇ ದೇಶಾಭಿಮಾನ ಮೈಗೂಡಿಸಿಕೊಂಡಿದ್ದರು, ಅವರ ಶ್ರಮದ ಫಲ,ಪ್ರೇರಣೆಯೇ ಇಂದು ವಿಶ್ವವೇ ನಿಬ್ಬೆರಗಾಗುವಂತೆ ಸಂಘ ಬೆಳೆದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ.
ಸನಾತನ,ಸಾವಿರಾರೂ ವರ್ಷದ ಇತಿಹಾಸವಿರುವ ಹಿಂದೂ ಧರ್ಮ ಗಟ್ಟಿಯಾಗಿ ನೆಲೆಸಿರುವ ದೇಶ ನಮ್ಮದು. ಆದರೆ ಹಿಂದೂ ರಾಷ್ಟç ಎಂದು ಹೇಳಲು ಕೆಲವರು ನಾಚಿಕೆ ಪಡುತ್ತಾರೆ, ಸಮಾಜ ಸ್ವಾರ್ಥದಲ್ಲಿ ಮುಳುಗಿದೆ ,ಶ್ರೇಷ್ಠ ಧರ್ಮದ ಬಗ್ಗೆ ಪ್ರತಿಯೊಬ್ಬರು ಹೆಮ್ಮೆ ಪಡಬೇಕು,ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಮೇಲು ಕೀಳು ಎಂಬ ಭಾವನೆ ಬಿಡಬೇಕು, ನಾವೆಲ್ಲಾ ಒಂದಾಗಬೇಕು ಎಂದು ಕರೆ ನೀಡಿದರು.
ಸಮಾರಂಭಕ್ಕೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ದುರ್ಯೋಧನ ಐಹೊಳೆ,ಜಗದೀಶ ಕವಟಗಿಮಠ,ಸತೀಶ ಅಪಾಜಿಗೋಳ,ಮಹೇಶ ಬಾತೆ,ಪೃಥ್ವಿ ಕತ್ತಿ,ಭರತೇಶ ಬನವಣೆ,ಬಾಹುಬಲಿ ನಸಲಾಪುರೆ,ಸಂಜಯ ಅಡಕೆ ಇತರರು ಇದ್ದರು.