ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
- ಶಿವಕಾಂತಮ್ಮ ನೇತೃತ್ವದಲ್ಲಿ ಕಾರ್ಯ
- 4.7 ಗ್ರಾಂ ಚಿನ್ನ, 83 ಗ್ರಾಂ ಬೆಳ್ಳಿ ಸಂಗ್ರಹ
ಅಫಜಲಪುರ: ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿರುವ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, 98.41 ಲ ರೂ. ಸಂಗ್ರಹವಾಗಿದೆ.
ದೇವಸ್ಥಾನದ ಆಡಳಿತಾಧಿಕಾರಿ ಶಿವಕಾಂತಮ್ಮ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಎಣಿಕೆ ಕಾರ್ಯ ಆರಂಭವಾಯಿತು. ಪ್ರತಿ ಮೂರು ತಿಂಗಳಿಗೊಮ್ಮೆ ಎಣಿಕೆ ಕಾರ್ಯ ಮಾಡಲಾಗುತ್ತಿದ್ದು, ಇದೀಗ 11 ಹುಂಡಿಗಳಲ್ಲಿ 98,41,324 ರೂ. ನಗದು, 4.7 ಗ್ರಾಂ ಚಿನ್ನಾಭರಣ ಹಾಗೂ 83 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿವೆ. ನಗದನ್ನು ದೇವಲಗಾಣಗಾಪುರದ ಎಸ್ಬಿಐ ಶಾಖೆಯ ದೇವಸ್ಥಾನ ಖಾತೆಯಲ್ಲಿ ಜಮೆ ಮಾಡಲಾಗಿದೆ. ಆಭರಣಗಳನ್ನು ಲಾಕರ್ನಲ್ಲಿ ಭದ್ರಪಡಿಸಲಾಗುತ್ತದೆ.
ಶಿಷ್ಟಾಚಾರ ತಹಸೀಲ್ದಾರ್ ಉಮಾಕಾಂತ ಹಳ್ಳೆ, ಶಿರಸ್ತೆದಾರ ಶೀಲಾ, ಪ್ರಮುಖರಾದ ದತ್ತಪ್ಪ ನಿಂಬರಗಿ, ಸತೀಶ, ಸುನಿತಾ, ಭಾರತಿ, ಶ್ರೀನಿವಾಸ, ಶರಣಯ್ಯ ಸ್ವಾಮಿ, ಧನರಾಜ, ಲಕ್ಷ್ಮಿ ಕಲ್ಮೇಶ ಇತರರಿದ್ದರು.