ಆಳಂದ ತಾಲೂಕಿನ ಧಂಗಾಪುರದಲ್ಲಿ ಶಾಸಕ ಬಿ.ಆರ್.ಪಾಟೀಲ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗುರುಲಿಂಗ ಜಂಗಮ ಪಾಟೀಲ್, ಈರಣ್ಣ ಝಳಕಿ, ಬಸವರಾಜ ಆಳಂದ, ವೀರೇಂದ್ರ ಶೇಗಜಿ ಇತರರಿದ್ದರು.
- ಶಾಸಕ ಬಿ.ಆರ್.ಪಾಟೀಲ್ ಘೋಷಣೆ
- ಧಂಗಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
ಆಳಂದ: ಧಂಗಾಪುರ ಗ್ರಾಮದಲ್ಲಿ ಮಾಜಿ ಶಾಸಕ ಶರಣಬಸಪ್ಪ ಪಾಟೀಲ್ ಅವರು ನಿರ್ಮಿಸಲು ಉದ್ದೇಶಿಸಿದ್ದ ಕಲ್ಯಾಣ ಮಂಟಪ ಪೂರ್ಣಗೊಳಿಸಲು 65 ಲಕ್ಷ ರೂ. ಅನುದಾನ ಮೀಸಲಿಡಲಾಗುವುದು ಎಂದು ಶಾಸಕ ಬಿ.ಅರ್.ಪಾಟೀಲ್ ಭರವಸೆ ನೀಡಿದರು.
ಧಂಗಾಪುರ ಗ್ರಾಮದಲ್ಲಿ ಕೆಕೆಆರ್ಡಿಬಿ ಯೊಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಸಂಜೆ ಗುದ್ದಲ್ಲಿ ಪೂಜೆ ನೆರವೇರಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ, ಕುಡಿವ ನೀರಿಗೆ ಪ್ರಥಮಾದ್ಯತೆ ನೀಡಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಯಂತೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪಿಯು ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ್, ಪ್ರಮುಖರಾದ ಈರಣ್ಣ ಝಳಕಿ, ಗುರುಭೀಮರಾವ ಆಳಂದ, ವಿರೇಂದ್ರ ಶೇಗಜಿ, ಬಸವರಾಜ ಆಳಂದ, ರಾಜಶೇಖರ ಯಕಂಚಿ, ಗುಂಡಪ್ಪ ಆಳಂದ, ಬಾಬುರಾವ ಗೊಬ್ಬೂರು, ಆಲೂಗೌಡ ಪಾಟೀಲ್, ಈರಣ್ಣ ಅಂಗಡಿ, ಸಿದ್ದಣ್ಣ ಕೆ., ಈರಣ್ಣ ಮನಿಗಿನಿ, ರೇವಣಪ್ಪ ಕಪ್ಪರಗಿ, ಹೊನ್ನೇಶ, ಭೀಮಸೇನ್ ರಾವ ಇತರರಿದ್ದರು.