ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ
ಹೊಸಕೋಟೆ : ಹಾಲು ಉತ್ಪಾದಕರಿಗೆ ಬಮುಲ್ನಿಂದ ಪ್ರತಿ ಲೀಟರ್ಗೆ 1 ರೂ. ನಂತೆ ವಿಶೇಷ ಹೆಚ್ಚುವರಿ ದರ ಬಿಡುಗಡೆ ಮಾಡಿ ಉತ್ಪಾದಕರ ಖಾತೆಗೆ ಜಮೆ ಮಾಡಲಾಗಿದೆ ಎಂದು ಬಮುಲ್ ನಿರ್ದೇಶಕ ಬಿ.ವಿ.ಸತೀಶ್ಗೌಡ ಹೇಳಿದರು.
ಬೆಂಡಿಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಬಮುಲ್ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಹಲವು ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ಉತ್ಪಾದಕರೇ ಬಮುಲ್ ಶಕ್ತಿಯಾಗಿದ್ದು, ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಅನುಕೂಲಕ್ಕಾಗಿ 2025 ಏ.1ರಿಂದ ಮಾ.31 2026ರ ಅವಧಿಯಲ್ಲಿ ಹಾಲು ಪೂರೈಕೆ ಮಾಡಿರುವವರಿಗೆ ಪ್ರತಿ ಲೀಟರಿಗೆ 1 ರೂ. ನಂತೆ ವಿಶೇಷ ಹೆಚ್ಚುವರಿ ದರ ನೀಡಲಾಗಿದೆ ಎಂದರು.
ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂದಿಂದ ಒಟ್ಟಾರೆ 12.94.17 ಲೀಟರ್ ಹಾಲನ್ನು ಬಮುಲ್ಗೆ ನೀಡಿದ್ದು, ಹೆಚ್ಚುವರಿ 1 ರೂ. ದರವನ್ನು ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಖಾತೆಯಿಂದ ನೇರವಾಗಿ ನನ್ನ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವರ್ಗಾವಣೆ ಮಾಡಿ ನುಡಿದಂತೆ ನಡೆದುಕೊಂಡ ಬಮುಲ್ ಅಧ್ಯಕ್ಷರಿಗೆ ತಾಲೂಕಿನ ಹೈನುಗಾರರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾಲೂಕಿಗೆ 3.53 ಕೋಟಿ : ರಾಜ್ಯಾದ್ಯಂತ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವವರ ಖಾತೆಗಳಿಗೆ ಹೆಚ್ಚುವರಿ ದರದ ಕಳುಹಿಸಲಾಗಿದ್ದು, ತಾಲೂಕಿನಲ್ಲಿ ಹಾಲು ಉತ್ಪಾದಕರಿಗೆ ಈ ವಿಶೇಷ ಹೆಚ್ಚುವರಿ ದರ ಯೋಜನೆಯಲ್ಲಿ 3.53 ಕೋಟಿ ರೂ. ಉತ್ಪಾದಕರ ಖಾತೆಗಳಿಗೆ ಕಳುಹಿಸಲಾಗಿದೆ. ರಾಜ್ಯದಲ್ಲಿಯೇ ಹೆಚ್ಚಿನ ಹೆಚ್ಚುವರಿ 1 ರೂಪಾಯಿ ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರಿಗೆ ಸಿಕ್ಕಿದೆ ಎಂದು ಬಿ.ವಿ.ಸತೀಶ್ಗೌಡ ಹೇಳಿದರು. ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್ ಹಾಜರಿದ್ದರು.