/ಬಸವಕಲ್ಯಾಣದಲ್ಲಿ ಬಸವೇಶ್ವರ ರಥೋತ್ಸವದ ವೇಳೆ ಸಂಭವಿಸಿದ ದುರ್ಟನೆಯಲ್ಲಿ ಗಂಭೀರ ಗಾಯಗೊಂಡು ಹೈದರಾಬಾದ್ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ರಿಷಬ್ ಶಿವಾನಂದ ನೇತೆ ಆರೋಗ್ಯ ವಿಚಾರಿಸುತ್ತಿರುವ ಶಾಸಕ ಶರಣು ಸಲಗರ.
- ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಲಗರ
- ಶಾಸಕರಿಂದ ವಯಕ್ತಿಕ ನೆರವು
ಬಸವಕಲ್ಯಾಣ: ಬಸವೇಶ್ವರ ರಥೋತ್ಸವದ ವೇಳೆ ಸಂಭವಿಸಿದ ದುರ್ಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ರಿಷಬ್ ಶಿವಾನಂದ ನೇತೆ ಅವರ ಚಿಕಿತ್ಸೆಗಾಗಿ ಶಾಸಕ ಶರಣು ಸಲಗರ ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವು ನೀಡಿದ್ದಾರೆ.
ಹೈದರಾಬಾದ್ನ ಖಾಸಗಿ ಅಸ್ಪತ್ರೆಗೆ ಭಾನುವಾರ ಭೇಟಿ ನೀಡಿ ರಿಷಬ್ ಆರೋಗ್ಯ ವಿಚಾರಿಸಿದ ಶಾಸಕರು, ಯಾವ ರೀತಿಯಿಂದಲೂ ಹೆದರಿಕೆ ಬೇಡ, ಧೈರ್ಯವಾಗಿರಬೇಕು. ಎಲ್ಲ ರೀತಿಯಿಂದಲೂ ನಾನು ಜತೆಗಿದ್ದು ಸಹಾಯ ಮಾಡುತ್ತೇನೆ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ನಂತರ ತ್ರಿಚಕ್ರ ವಾಹನ ಕೊಡಿಸುತ್ತೇನೆ. ಮುಂದೆ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ತಾಲೂಕು ಗ್ರಾಮೀಣ ಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ಪ್ರಮುಖರದ ಓಂ ಪಾಟೀಲ್, ಸದಾನಂದ ಪಟಿಲ್ ಮುಡಬಿ ಜತೆಗಿದ್ದರು.