ಲಬುರಗಿ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಳೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ವೆಂಕಟಸ್ವಾಮಿ, ಎ.ಬಿ.ಹೊಸಮನಿ, ಕಾಕಾಸಾಹೇಬ್ ಕಂಬಾಳಕರ್, ರಾಜಾ ಸರ್ವದೆ ಇತರರಿದ್ದರು.
- ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿಕೆ
- ಶೋಷಿತ ಸಮುದಾಯ ಅಭ್ಯುದಯಕ್ಕೆ ಕೇಂದ್ರ ಪಣ
ಕಲಬುರಗಿ: ಪ್ರಸಕ್ತ 2026-27ನೇ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳ ಕಲ್ಯಾಣಕ್ಕೆ ಸುಮಾರು 1,96,400.37 ಕೋಟಿ ರೂ. ಹಣ ಮೀಸಲಿರಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಹೇಳಿದರು.
ನಗರದ ಐವಾನ್&ಎ&ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಆಯವ್ಯಯದಲ್ಲಿ 35,195.27 ಕೋಟಿ ರೂ. ಹೆಚ್ಚಳವಾಗಿದೆ. ಇದು ತಳ ುುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆ ತೋರಿಸುತ್ತದೆ ಎಂದರು.
ದಲಿತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮೂಲಕ ಅನೇಕ ಯೋಜನೆ ರೂಪಿಸಿದೆ. ಜತೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆ, ಮುದ್ರಾ ಯೋಜನೆ, ಜನಧನ ಯೋಜನೆ, ಸ್ವಚ್ಛ ಭಾರತ ಮಿಷನ್ ಹೀಗೆ ಅನೇಕ ಸಮಾಜ ಸುಧಾರಣೆ ಯೋಜನೆ ಹಾಕಿಕೊಂಡಿದೆ. ತಮ್ಮ ಸಚಿವಾಲಯವು ಓ.ಬಿ.ಸಿ, ವಿಶೇಷಚೇತನರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಶ್ರಮಿಸುತ್ತಿದೆ ಎಂದರು.
ಆದರ್ಶ ಗ್ರಾಮ ಯೋಜನೆಯಡಿ ಕಳೆದ 2021&22 ರಿಂದ 2025&26ರವರೆಗೆ 85 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಹೈಮಾಸ್ಟ್ ದೀಪ ಅಳವಡಿಕೆಯಂತಹ 205 ಕಾಮಗಾರಿಗಳ ಸಮರ್ಪಕ ಅನುಷ್ಠಾನ ಮಾಡಿ 65 ಗ್ರಾಮಗಳನ್ನು ಆದರ್ಶ ಗ್ರಾಮವೆಂದು ೂಷಿಸಲಾಗಿದೆ. 2025&26ರಲ್ಲಿ 20 ಗ್ರಾಮಗಳ ಆಯ್ಕೆ ಮಾಡಿದ್ದು, ಡಿಪಿಆರ್ ಕಾರ್ಯ ಸಿದ್ಧತೆಯಲ್ಲಿದೆ. 2021&22 ರಿಂದ 2025&26 ಅವಧಿಯಲ್ಲಿ ಒಟ್ಟಾರೆ 7.68 ಕೋಟಿ ರೂ. ಕಲಬುರಗಿ ಜಿಲ್ಲೆಗೆ ಹಂಚಿಕೆ ಮಾಡಿದ್ದು, ಅಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಸಚಿವ ಅಠವಳೆ ತಿಳಿಸಿದರು.
ಸಬಕಾ ಸಾತ್ ಸಬಕಾ ವಿಕಾಸ್ ೂಷವಾಕ್ಯದೊಂದಿಗೆ ಸರ್ವ ಜನರ ಹಿತ ಕಾಪಾಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಸಮಾಜ ಸುಧಾರಕ ಕಾಕಾ ಕಾಳೆಸ್ಕರ್ ನೇತೃತ್ವದ ಹಿಂದುಳಿದ ಆಯೋಗವು ಓಬಿಸಿ ವರ್ಗಕ್ಕೆ ಶಿಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿ ವರದಿ ನೀಡಿದ್ದರು ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಮಂಡಲ್ ಆಯೋಗದ ಪರಿಣಾಮ ಶೇ.27 ಮೀಸಲಾತಿ ಈ ಸಮುದಾಯಕ್ಕೆ ದೊರಕಿತ್ತು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಲ್ಪಿಸಿದ್ದರಿಂದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲು ಲಭ್ಯವಾಗುತ್ತಿದೆ. ಸರ್ವರ ಹಿತ ಬಯಸುವ ನಮ್ಮ ಸರ್ಕಾರ ಹಿಂದುಳಿದ ಸಮಯದಾಯಕ್ಕೆ ನ್ಯಾಯ ಕಲ್ಪಿಸಲು ದೇಶದಾದ್ಯಂತ ಹಿಂದುಳಿದವರ ಜಾತಿ ಜನಗಣತಿ ಮಾಡಲು ನಿರ್ಧರಿಸಿದೆ ಎಂದರು.
ಆರ್ಪಿಐ ಪದ ರಾಷ್ಟ್ರೀಯ ಕಾರ್ಯಧ್ಯ ಡಾ.ವೆಂಕಟಸ್ಚಾಮಿ, ಉಪಾಧ್ಯ ಕಾಕಾಸಾಹೇಬ್ ಕಂಬಾಳಕರ್, ಮಹಾರಾಷ್ಟ್ರದ ಟಕದ ಅಧ್ಯ ರಾಜಾ ಸರ್ವದೆ, ಮುಂಬೈ ಪ್ರದೇಶದ ಪ್ರಧಾನ ಕಾರ್ಯದರ್ಶಿ ವಿವೇಕ ಪವಾರ, ದಣ ಭಾರತದ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ, ಪ್ರಕಾಶ ಮೂಲಭಾರತಿ, ನಾಗೇಶ ತಳಕೇರಿ ಇತರರಿದ್ದರು.
"
ಪೆಟ್ರೋಲ್&ಡೀಸೆಲ್, ಅಡುಗೆ ಅನಿಲ ದರ ಏರಿಕೆ ಕುರಿತಂತೆ ಮಾತನಾಡಿದ ಸಚಿವರು, ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಪೆಟ್ರೋಲಿಯಂ, ಗ್ಯಾಸ್ ಉತ್ಪನ್ನಗಳಲ್ಲಿ ದರ ಏರಿಕೆಯಾಗುತ್ತಿದೆ. ದರ ಹೆಚ್ಚಳ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಹಿಂದೆ ಯುಪಿಎ ಸರ್ಕಾರದ ಕಾಲದಲ್ಲಿಯೂ ಪೆಟ್ರೋಲ್ ದರ ಹತ್ತು ಬಾರಿ ಹೆಚ್ಚಿಸಿದರು. ದರ ಏರಿಕೆ ನಿಯಂತ್ರಣಕ್ಕೆ ಪ್ರಯತ್ನ ನಡೆದಿದೆ.
— ರಾಮದಾಸ್ ಅಠವಳೆ, ಕೇಂದ್ರ ಸಚಿವ.