ಕೆಂಭಾವಿ ಪುರಸಭೆಯಲ್ಲಿ ಗುರುವಾರ ನಡೆದ ಅಧ್ಯೆ ಪ್ರಿಯಾ ಪೊಲೀಸ್ ಪಾಟೀಲ್ ಅಧ್ಯಕ್ಷತೆಯ 2026&27ರ ಬಜೆಟ್ ಸಭೆಯಲ್ಲಿ ಉಪಾಧ್ಯೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಪ್ರಕಾಶ ಬಾಕಲಿ, ಸುರೇಂದ್ರ, ಪರಶುರಾಮ ಇದ್ದರು.
- ಅಧ್ಯಕ್ಷೆ ಪ್ರಿಯಾ ಪೊಲೀಸ್ ಪಾಟೀಲ್ ಅಧ್ಯಕ್ಷತೆಯಲ್ಲಿ ಕೆಂಭಾವಿ ಪುರಸಭೆ ಸಭೆ
ಕೆಂಭಾವಿ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ 2026-27ರಲ್ಲಿ 1.53 ಕೋಟಿ ರೂ. ಬಜೆಟ್ ಅನ್ನು ಅಧ್ಯಕ್ಷೆ ಪ್ರಿಯಾ ಪೊಲೀಸ್ ಪಾಟೀಲ್ ಅಧ್ಯಕ್ಷತೆಯ ಪುರಸಭೆ ಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
ಬೆಳಗ್ಗೆ 11ರ ಬದಲು ಒಂದೂವರೆ ತಾಸು ವಿಳಂಬವಾಗಿ ಶುರುವಾದ ಸಭೆಯಲ್ಲಿ ಮುಖ್ಯಾಧಿಕಾರಿ ಪ್ರಕಾಶ ಬಾಕಲಿ ಮಾತನಾಡಿ, ಪಟ್ಟಣದ ಸಮಗ್ರ ವಿಕಾಸಕ್ಕೆ ಅಧ್ಯಕ್ಷ-ಉಪಾಧ್ಯಕ್ಷರು ಸೇರಿ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.
ಸಭೆ ಆರಂಭವಾಗುತ್ತಿದ್ದಂತೆ ಸ್ವಚ್ಛತೆ ಬಗ್ಗೆ ಸದಸ್ಯರು ಧ್ವನಿ ಎತ್ತಿದರು. ಪಟ್ಟಣದಲ್ಲಿ ಹಲವು ತಿಂಗಳಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಮುಖ್ಯ ರಸ್ತೆಗಳಲ್ಲಿ ಕಸ, ಚರಂಡಿ ನೀರು ಹರಿಯುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಆಡಳಿತ ರ್ನಿಲಕ್ಷ ವಹಿಸಿದೆ ಎಂದು ರವಿ ಸೊನ್ನದ ಆಕ್ರೋಶ ಹೊರಹಾಕಿದರು. ಧ್ವನಿಗೂಡಿಸಿದ ಶಿವಶಂಕರ ಖಾನಾಪುರ ಹಾಗೂ ಆರೀಫ್ ಹುಸೇನ್ ಖಾಜಿ, 23 ವಾರ್ಡ್ಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಮಲಿನಗೊಳ್ಳುತ್ತಿದೆ ಎಂದು ದೂರಿದರು. ನಮ್ಮಲ್ಲಿ ಕೆಲ ಸ್ವಚ್ಛತಾ ಸಿಬ್ಬಂದಿ ತರಬೇತಿಗೆ ತರಳಿದ್ದು, ಏ.1ರಂದು ವಿಶೇಷ ತಂಡ ರಚಿಸಿ ಎಲ್ಲ 23 ವಾರ್ಡ್ಗಳಲ್ಲಿ ಶುಚಿತ್ವದ ಬಗ್ಗೆ ಗಮನಹರಿಸುವುದಾಗಿ ಮುಖ್ಯಾಧಿಕಾರಿ ಸಮಜಾಯಿಷಿ ನೀಡಿದರು.
ಕಳೆದ ಬಾರಿ ಕರ ವಸೂಲಿಯಲ್ಲಿ ಪುರಸಭೆ ಹಿಂದೆ ಬಿದ್ದಿದ್ದು, ಹೀಗೆ ಮುಂದುವರಿದರೆ ಸರ್ಕಾರದ ಅನುದಾನ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಶ್ರೀಧರ ದೇಶಪಾಂಡೆ ಎಚ್ಚರಿಸಿದರು. ಏ.1ರಿಂದ ಕರವಸೂಲಿಯಲ್ಲಿ ಹಲವು ಬದಲಾವಣೆ ಮಾಡುತ್ತಿದ್ದು ಪ್ರತಿಯೊಬ್ಬ ನೌಕರನಿಗೆ ಜವಾಬ್ದಾರಿ ನೀಡಿ ಮನೆಮನೆಗೆ ತೆರಳಿ ಕರ ವಸೂಲಿ ಮಾಡಲಾಗುವುದು ಎಂದು ಸಿಒ ಬಾಕಲಿ ಹೇಳಿದರು.
ಶರಣಪ್ಪ ಯಾಳಗಿ, ದೇವೇಂದ್ರಪ್ಪ ಟಣಕೆದಾರ ಮಾತನಾಡಿದರು. ಉಪಾಧ್ಯೆ ಲಕ್ಷ್ಮೀಬಾಯಿ ಕಂಬಾರ, ಪರಶುರಾಮ, ಸುರೇಂದ್ರ, ಕಾಶೀನಾಥ ಇದ್ದರು.
ಶೌಚಗೃಹಗಳ ಕುರಿತು ವಿಶೇಷ ಧ್ವನಿ ಎತ್ತಿದ ಮುಖ್ಯಾಧಿಕಾರಿ ಪ್ರಕಾಶ ಬಾಕಲಿ, ಒಬ್ಬರಿಗೆ ಎರಡರಂತೆ 28 ಸದಸ್ಯರಿಗೆ 56 ಹಾಗೂ ವೈಯಕ್ತಿಕ ಸೇರಿ 63 ಶೌಚಗೃಹಗಳು ಬಂದಿದ್ದು, ಅರ್ಹರಿಗೆ ಯೋಜನೆ ಲಾಭ ತಲುಪುವಂತೆ ಎಲ್ಲರೂ ಸಹಕರಿಸಬೇಕು. ಯಾವುದೇ ಬೋಗಸ್ ಚೆಕ್ (ಪರೋಕ್ಷವಾಗಿ) ಪಡೆಯಲು ಅವಕಾಶ ನೀಡದೆ ಪಾರದರ್ಶಕ ಕೆಲಸ ನಿರ್ವಹಣೆಗೆ ಅವಕಾಶ ನೀಡುವಂತೆ ಕೈಮುಗಿದು ಮನವಿ ಮಾಡಿದರು.
ಈ ವಿಶೇಷ ಸಭೆಗೆ ಗೈರು ಹಾಜರಾಗಿರುವ ಕರ ವಸೂಲಿಗಾರರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನತೆ ಪುರಸಭೆ ಬಾಗಿಲಿಗೆ ಬಂದು ಕರ ಕಟ್ಟುತ್ತೇವೆ ಎಂದರೂ ರ್ನಿಲಕ್ಷ ವಹಿಸುತ್ತಿರುವುದು ಸರಿಯಲ್ಲ. ಕೂಡಲೇ ವಿಚಾರಣೆ ನಡೆಸಿ ಸಭೆಗೆ ಎಲ್ಲರೂ ಬರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
> ರವಿ ಸೊನ್ನದಸದಸ್ಯ, ಪುರಸಭೆ ಕೆಂಭಾವಿ