Rs 1.50 reduction per liter of milk 
ರಾಜ್ಯ

ಲೀಟರ್​ ಹಾಲಿಗೆ 1.50 ರೂ. ಕಡಿತ

"

ಹೆಚ್ಚಳದ ಕಡಿತ

ಹಿಂದೆ ಹಾಲಿನ ಉತ್ಪಾದನೆ ಪ್ರಮಾಣ ಕುಸಿಯುವುದರ ಹಿನ್ನೆಲೆಯಲ್ಲಿ ಜಿಲ್ಲಾ ಒಕ್ಕೂಟವು ಹಾಲು ಉತ್ಪಾದಕರಿಗೆ ಲೀಟರ್​ ಹಾಲಿಗೆ ನೀಡಲಾಗುವ ದರದಲ್ಲಿ 1.50 ರೂ. ಹೆಚ್ಚಿಸಿತ್ತು. ಬೇಸಿಗೆ ಅವಧಿಯ 3 ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ ಎಂಬುದಾಗಿ ಹೇಳಿತ್ತು. ಈಗ ಮಳೆಗಾಲದಲ್ಲಿ ಸಮೃದ್ಧ್ಧ ಮೇವು, ನೀರಿನ ಸಮರ್ಪಕ ಪೂರೈಕೆ ಸೇರಿ ಹಲವು ಸೌಕರ್ಯಗಳಿಂದ ಉತ್ಪಾದನೆ ಪ್ರಮಾಣ ಹೆಚ್ಚಳವಾಗುವ, ಒಕ್ಕೂಟಕ್ಕೆ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇರುವುದರಿಂದ ದರ ಕಡಿತಗೊಳಿಸುವ ತೀಮಾರ್ನ ಕೈಗೊಳ್ಳಲಾಗಿದೆ.

ಹಾಲಲ್ಲ, ನಿರ್ವಹಣೆ ವೆಚ್ಚ

ನಿರಂತರವಾಗಿ ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ಹಾಲಿನ ದರವನ್ನು ಹೆಚ್ಚಿಸಿ, ರೈತರನ್ನು ಪ್ರೋತ್ಸಾಹಿಸಬೇಕು. ಇದನ್ನು ಬಿಟ್ಟು ಹೊರೆ ಹಾಕುವುದಲ್ಲ. ಇನ್ನು ಒಕ್ಕೂಟದ ಆಡಳಿತ ಮಂಡಳಿಯು ದುಂದು ವೆಚ್ಚ, ಅನಗತ್ಯ ಚಟುವಟಿಕೆ, ಸನ್ಮಾನ ಕಾರ್ಯಕ್ರಮಗಳು ಸೇರಿ ಅನಪೇಕ್ಷಿತ ಕೆಲಸಗಳಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡಬೇಕು. ಇದರ ಲಾಭವನ್ನು ರೈತರಿಗೆ ವರ್ಗಾಯಿಸಬೇಕು. ಇದರಿಂದ ಹೈನೋದ್ಯಮ ಅಭಿವೃದ್ಧಿ ನಿರೀಕ್ಷೆ ಸಾಧ್ಯ. ಇಲ್ಲದಿದ್ದಲ್ಲಿ ಆದಾಯ ಸಿಗದೇ ರೈತರು ವಿಮುಖರಾಗುವುದು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈಗಲೇ ದುಬಾರಿ ಪಶು ಆಹಾರ, ನಿರ್ವಹಣೆ ವೆಚ್ಚ ಹೆಚ್ಚಳದಿಂದ ಅನೇಕ ರೈತರು ಹಾಲು ಉತ್ಪಾದನೆ ಕಸುಬಿನಿಂದ ವಿಮುಖರಾಗುತ್ತಿದ್ದಾರೆ. ಈ ನಡುವೆ ಚಿಮುಲ್​ ಪ್ರತಿ ಲೀಟರ್​ ಹಾಲಿಗೆ ರೈತರಿಗೆ ನೀಡುತ್ತಿರುವ ದರವನ್ನು ಕಡಿಮೆ ಮಾಡಿರುವುದು ಖಂಡನೀಯ. ಇದರ ಬದಲು ಒಕ್ಕೂಟದ ನಿರ್ದೇಶಕರು ಸನ್ಮಾನ ಕಾರ್ಯಕ್ರಮ, ಪ್ರಚಾರ ಚಟುವಟಿಕೆ ಸೇರಿ ಇತರ ಕೆಲಸಗಳಿಗೆ ಅನವಶ್ಯಕ ಹಣ ವೆಚ್ಚ ಮಾಡುವುದನ್ನು ಬಿಡಬೇಕು.

ಉತ್ಪಾದನೆಯಲ್ಲಿ ಮುಂಚೂಣಿ

ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಬೇರ್ಪಟ್ಟ ಸಂದರ್ಭದಲ್ಲಿ 3.90 ಲಕ್ಷ ಲೀಟರ್​ ಹಾಲು ಶೇಖರಣೆಯಾಗುತ್ತಿತ್ತು.ಈಗ 5.0 ಲಕ್ಷ ಲೀಟರ್​ಗೆ ಏರಿಕೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ಈ ಪೈಕಿ 125 ಮಹಿಳಾ ಸಂಘಗಳು ಸೇರಿವೆ. ಪ್ರತಿನಿತ್ಯ ಗುಣಮಟ್ಟದ ಹಾಲು ಪೂರೈಕೆಯಾಗಿದ್ದು, ಬಹುತೇಕ ಸಂಘಗಳು ಲಾಭದಲ್ಲಿವೆ. ಇನ್ನು ಚಿಮುಲ್​ನಿಂದ ಕಾಶ್ಮೀರ, ಪಶ್ಚಿಮಬಂಗಾಲ, ಗೋವಾ ಹಾಗೂ ರಕ್ಷಣಾ ಸೈನಿಕ ದಳಕ್ಕೆ ನಂದಿನಿ ಹಾಲು ಪೂರೈಕೆಯಾಗುತ್ತಿದೆ.

ಅಭಿವೃದ್ಧಿಗೆ ಸಹಕಾರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಹಾಲು ಉತ್ಪಾದಕರಿಗೆ ಲೀಟರ್​ ಹಾಲಿಗೆ 5 ರೂ. ಪ್ರೋತ್ಸಾಹ ಧನವನ್ನು ಪಾರದರ್ಶಕವಾಗಿ ವಿತರಿಸಲು ಕ್ಷೀರಸಿರಿ ಪೋರ್ಟಲ್​ ಬಳಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಹಾಲು ಸಂಗ್ರಹಣೆಯ ನೈಜ ಸಮಯದ ಮಾಹಿತಿಯನ್ನು ಅಳವಡಿಸಲು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚಿಮುಲ್​ ಸೂಚಿಸಿದೆ. ಹಾಲಿನ ಗುಣಮಟ್ಟ ಹಾಗೂ ತೂಕ ಖಾತ್ರಿಪಡಿಸಿಕೊಂಡು ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರಿಗೆ ನೀಡಬೇಕು. ಆಹಾರ ಸುರಕ್ಷತಾ ಕಾಯ್ದೆ ಅನ್ವಯ ಕಲಬೆರಕೆ ರಹಿತ ಹಾಲನ್ನು ಸಂಗ್ರಹಿಸಿ, ಪೂರೈಸಲು ತಿಳಿಸಿದೆ.

ಈಗ 35.40 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಇನ್ನು ಗುಣಮಟ್ಟವನ್ನಾಧಾರಿಸಿ ರೈತರಿಗೆ 34.65 ರೂ.ಗಳಿಂದ 34.15 ರೂ.(ಲೀಟರ್​ ಹಾಲಿಗೆ) ಸಿಗಲಿದೆ.